
ಬೆಂಗಳೂರು (ಮಾ. ೦4): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ನವೀನ್ ಎಂಬಾತನನ್ನು ಎಸ್ಐಟಿ ಬಂಧಿಸಿತ್ತು. ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕೆ ನವೀನ್ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಎಸ್’ಐಟಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದಿದ್ದಾನೆ.
ಬರೋಬ್ಬರಿ 45 ನಿಮಿಷಗಳ ಕಾಲ ಎಸ್ಐಟಿ ಅಧಿಕಾರಿಗಳ ವಿರುದ್ದ ನವೀನ್ ದೂರು ನೀಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ನವೀನ್’ನನ್ನ ಎಸ್’ಐಟಿ ಕೋರ್ಟ್ಗೆ ಹಾಜರುಪಡಿಸಿತ್ತು. ಆಗ ನ್ಯಾಯಧೀಶರ ಮುಂದೆ ನವೀನ್ ಅಲಿಯಾಸ್ ಹೊಟ್ಟೆಮಂಜ ಎಸ್’ಐಟಿ ಅಧಿಕಾರಿಗಳ ವಿರುದ್ಧವೇ ದೂರು ನೀಡಿದ್ದಾನೆ.
ನಾನು ನಿಮ್ಮ ಜೊತೆ ಏಕಾಂಗಿಯಾಗಿ ಮಾತನಾಡಬೇಕು. ಎಸ್’ಐಟಿ ಅಧಿಕಾರಿಗಳನ್ನು ಹೊರಗಡೆ ಕಳುಹಿಸಿ ಎಂದು ನವೀನ್ ನ್ಯಾಯಧೀಶರನ್ನ ಕೇಳಿದ್ದ. ನವೀನ್ ಮನವಿಯಂತೆ ಎಸ್ಐಟಿ ಅಧಿಕಾರಿಗಳನ್ನ ನ್ಯಾಯಾಧೀಶರು ಹೊರಗಡೆ ಕಳುಹಿಸಿದ್ದರು. ಈ ವೇಳೆ ಇಬ್ಬರು ಎಸ್ಐಟಿ ಅಧಿಕಾರಿಗಳ ವಿರುದ್ಧ ನವೀನ್ ದೂರಿನ ಸುರಿಮಳೆಗೈದಿದ್ದಾನೆ. ಎಸ್’ಐಟಿ ಅಧಿಕಾರಿಗಳು ತಮ್ಮನ್ನು ಎನ್’ಕೌಂಟರ್ ಮಾಡ್ತೀನಿ ಅಂತ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಹೆಂಡತಿ ಹಾಗೂ ತಂಗಿಯನ್ನ ಜೈಲಿನಲ್ಲಿ ಕೂರಿಸ್ತೀವಿ ಅಂತ ಹೇಳ್ತಿದ್ದಾರೆ. ನನಗೆ ಮಾನಸಿಕವಾಗಿ ಒತ್ತಡ ಹಾಕ್ತಿದ್ದಾರೆ ಎಂದಿದ್ದಾನೆ.
ಪ್ರಕರಣದಿಂದ ಎಸ್ಕೇಪ್ ಆಗಲು ನವೀನ್ ಮಾಡಿರೋ ಮಾಸ್ಟರ್ಪ್ಲಾನ್ ಇದು ಎನ್ನಲಾಗುತ್ತಿದೆ. ಇದೀಗ ನವೀನ್’ನನ್ನ ವಶಕ್ಕೆ ಪಡೆದು ತೀವ್ರ ಎಸ್’ಐಟಿ ತೀವ್ರ ವಿಚಾರಣೆಗೊಳಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.