
ಬೆಂಗಳೂರು (ಅ.25): ಗೌರಿ ಲಂಕೇಶ್ ಫೇಸ್'ಬುಕ್ ಅಕೌಂಟ್ ಮತ್ತೆ ಆ್ಯಕ್ಟೀವ್ ಆಗಿದೆ. ತನಿಖೆಯ ದಾರಿ ತಪ್ಪಿಸಲು ಫೇಸ್ ಬುಕ್ ಆ್ಯಕ್ಟೀವ್ ಮಾಡಲಾಯ್ತಾ? ಗೌರಿ ಹತ್ಯೆ ಬಳಿಕವೂ ಫೇಸ್ ಬುಕ್ ಅಕೌಂಟ್ಗೆ ಓಪನ್ ಮಾಡಿದ್ಯಾರು? ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಫೇಸ್ ಬುಕ್ ರೀ ಆ್ಯಕ್ಟೀವ್ ನಾವು ಮಾಡಿಲ್ಲ ಎಂದು ಗೌರಿ ಕುಟುಂಬ ಹೇಳಿದೆ. ತನಿಖಾ ಉದ್ದೇಶಕ್ಕೆ ನಾವು ಲಾಗಿನ್ ಮಾಡಿಲ್ಲ ಎಂದು ಎಸ್ಐಟಿ ಸ್ಪಷ್ಟನೆ ನೀಡಿದೆ.
ನಿನ್ನೆ ಬೆಳಗ್ಗೆ 10 ಗಂಟೆ ವೇಳೆಗೆ ಗೌರಿ ಫೇಸ್ಬುಕ್ ಅಕೌಂಟ್ ಲಾಗಿನ್ ಆಗಿದೆ. ನಿನ್ನೆ ಸಂಜೆವರೆಗೂ ಆ್ಯಕ್ಟೀವ್ ಆಗಿತ್ತು. ನಮ್ಮ ಬಳಿ ಗೌರಿ ಟ್ವಿಟರ್, ಫೇಸ್ ಬುಕ್ ಪಾಸ್ ವರ್ಡ್ ಇಲ್ಲ. ಮಾಹಿತಿ ಬೇಕಿದ್ದರೆ ಫೇಸ್ಬುಕ್ ಕಂಪನಿಯಿಂದ ಪಡೆದುಕೊಳ್ಳುತ್ತೇವೆ ಎಂದು ಸುವರ್ಣ ನ್ಯೂಸ್ಗೆ ತನಿಖಾಧಿಕಾರಿ ಡಿಸಿಪಿ ಅನುಚೇತ್ ಹೇಳಿದ್ದಾರೆ.
ಗೌರಿ ಫೇಸ್ಬುಕ್ ಪಾಸ್ ವರ್ಡ್ ಆಕೆಯ ಕೆಲ ಸ್ನೇಹಿತರಿಗೆ ಗೊತ್ತಿತ್ತು. ಆದರೆ ಮತ್ತೆ ಯಾರು ರೀಆ್ಯಕ್ಟೀವ್ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಎಸ್ ಐ ಟಿ ಅಧಿಕಾರಿಗಳಿಗೂ ಕೂಡ ಪಾಸ್ ವರ್ಡ್ ನೀಡಲಾಗಿದೆ. ನಿನ್ನೆ ವಿಷಯ ಗೊತ್ತಾದ ಮೇಲೆ ನಾನು ಪಾಸ್ ವರ್ಡ್ ಬದಲಿಸಿದ್ದೇನೆ ಎಂದು ಅನುಚೇತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.