ಗಂಗಾ ನೀರು ಸ್ನಾನಕ್ಕೂ ಯೋಗ್ಯವಲ್ಲ.. ವರದಿ ಕೊಟ್ಟಿದ್ದು ಯಾರು?

By Web DeskFirst Published May 30, 2019, 6:21 PM IST
Highlights

ನಿಜಕ್ಕೂ ಇದೊಂದ ಆಘಾತಕಾರಿ ಸುದ್ದಿ. ಪವಿತ್ರ ಗಂಗಾ ನದಿಯ ನೀರನ್ನು ನೇರವಾಗಿ ಕುಡಿಯಲು ಸಾಧ್ಯವೇ ಇಲ್ಲ ಎಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ನವದೆಹಲಿ[ಮೇ. 30] ಈ ಸುದ್ದಿಯನ್ನು ಅನಿವಾರ್ಯವಾಗಿ ಅರಗಿಸುಕೊಳ್ಳಲೇಬೇಕಾಗಿದೆ.  ಗಂಗಾ ನದಿ ನೀರನ್ನು ನೇರವಾಗಿ ಸೇವನೆ ಮಾಡಲು ಸಾಧ್ಯವೇ ಇಲ್ಲ ಎಂದು  ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ [ಸಿಪಿಸಿಬಿ] ಹೇಳಿದೆ.

ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ವ್ಯಾಪ್ತಿಯ ನದಿ ಪಾತ್ರದಲ್ಲಿ ನೀರು ಕುಡಿಯಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಮಂಡಳಿ ನಕಾಶೆಯೊಂದನ್ನು ಬಿಡುಗಡೆ ಮಾಡಿದ್ದು ನೀರು ಕುಡಿಯಲು ಮತ್ತು ಸ್ನಾನಕ್ಕೂ ಯೋಗ್ಯವಲ್ಲ ಎಂದು ಹೇಳಿದೆ.

ಮಲಿನ ನೀರು ಗಂಗಾ ನದಿ ಸೇರುವುದಕ್ಕೆ ಬ್ರೇಕ್!

ಗಂಗಾ ನದಿಯ ಪರಿಶೀಲನಾ ಘಟಕಗಳಿಂದ ಸಂಗ್ರಹಿಸಿದ ಸ್ಯಾಂಪಲ್ ಆಧರಿಸಿ ಲೇಟೆಸ್ಟ್ ವರದಿ ಬಿಡುಗಡೆ ಮಾಡಲಾಗಿದೆ.  62 ಜಾಗದಲ್ಲಿ ನೀರು ಬಳಕೆಗೆ ಅಯೋಗ್ಯವಾಗಿದ್ದರೆ 18 ಕಡೆ ಮಾತ್ರ ಬಳಕೆ ಮಾಡಲು ಸಾಧ್ಯವಾಗುಂತೆ ಇದೆ. 

ಗಂಗಾ ನದಿಯ ಉಪನದಿಗಳ ನೀರನ್ನು ಬಳಸಲು ಸಾಧ್ಯವಿಲ್ಲ ಎಂಬ ಆತಂಕಕಾರಿ ಮಾಹಿತಿಯನ್ನು ಮಂಡಳಿ ನೀಡಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕ್ಲೀನ್ ಗಂಗಾ ಎಂಬ ಯೋಜನೆಯನ್ನೇ ಹಾಕಿಕೊಂಡು ನದಿ ಶುದ್ದೀಕರಣಕ್ಕೆ ಮುಂದಾಗಿದೆ. ಈ ನಡುವೆ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ವರದಿ ಸರ್ಕಾರಕ್ಕೆ ಮತ್ತೊಂದು ಸಂದೇಶ ರವಾನಿಸಿದೆ.

click me!