
ಬೆಂಗಳೂರು(ಫೆ.11): ಕುಖ್ಯಾತ ರೌಡಿ ಕಡಬಗೆರೆ ಸೀನನ ಮೇಲೆ ಶೂಟ್ ಔಟ್ ನಡೆದಾಗಿನಿಂದ ಬೆಂಗಳೂರನಲ್ಲಿನ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಎಲ್ಲಾ ರೌಡಿಗಳಿಗೂ ಖಡಕ್ ವಾರ್ನಿಂಗ್ ನೀಡಿದ್ದರು. ಆದರೆ ಹೇಮಂತ್ ನಿಂಬಾಳ್ಕರ್ ಅವರ ಈ ಮಾತು ಡೈಲಾಗ್'ಗೆ ಮಾತ್ರ ಸೀಮಿತವಾಯಿತು. ಯಾಕೆಂದರೆ ನಿಂಬಾಳ್ಕರ್ ಹೇಳಿಕೆ ನೀಡಿ ಒಂದು ವಾರನೂ ಆಗಿಲ್ಲ. ಆಗಲೇ ನಗರದಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ರೌಡಿಗಳು ಮತ್ತೆ ಬಾಲ ಬಿಚ್ಚಿದ್ದಾರೆ. ಈ ಘಟನೆ ರೌಡಿಗಳಿಗೆ ಪೊಲೀಸರ ಭಯವೇ ಇಲ್ಲವಾ ಎಂಬ ಪ್ರಶ್ನೆ ಮೂಡಿಸಿದೆ.
ಇನ್ನೂ ಕಡಬಗೆರೆ ಸೀನನ ಶೂಟೌಟ್ ಕೇಸ್ ಸಂಬಂಧ ಅಗ್ನಿ ಶ್ರೀಧರ್ ಬಂಧನದ ವೇಳೆಯೂ ನಿಂಬಾಳ್ಕರ್ ರೌಡಿಸಂ ಚಟುವಟಿಕೆಗಳಿಗೆ ಬ್ರೇಕ್ ಹಾಕುವಂತೆಯೂ ಹೇಳಿದ್ದರು. ಅಷ್ಟರಲ್ಲೇ ಮತ್ತೆ ರೌಡಿಗಳು ತಮ್ಮ ಅಟ್ಟಹಾಸ ಮುಂದುವರೆದಿದೆ.
ಹಾಡಹಗಲೇ ಹರಿಯಿತು ರಕ್ತದೋಕುಳಿ: ರೌಡಿ ಶೀಟರ್ ಲಂಬು ಸೋಮ ಖಲ್ಲಾಸ್
ಆದರೆ ಹೇಮಂತ್ ನಿಂಬಾಳ್ಕರ್ ನೀಡಿದ ಈ ವಾರ್ನಿಂಗ್'ಗೆ ರೌಡಿಗಳು ಸೊಪ್ಪು ಹಾಕಿಲ್ಲ. ನಿನ್ನೆ ಸಂಜೆ ಐದು ಮೂವತ್ತರ ಸಮಯ ಬ್ಯಾಟರಾಯನಪುರ ಟಿಂಬರ್ ಯಾರ್ಡ್ ಸರ್ಕಲ್ ಬಳಿ ನಿಂತಿದ್ದ ಸೋಮ ಅಲಿಯಾಸ್ ಲಂಬು ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದಾರೆ. ಹುಡುಗಿ ವಿಚಾರಕ್ಕಾಗಿ ಸುನೀಲ್ ಗ್ಯಾಂಗ್ ಸೋಮನ ಮೇಲೆ ಅಟ್ಯಾಕ್ ಮಾಡಿ ರಕ್ತದೋಕುಳಿ ಹರಿಸಿದೆ.
ಹಾಗಾದರೆ ರೌಡಿಗಳನ್ನು ಹೆಡೆಮುರಿ ಕಟ್ಟುತ್ತೀವಿ ಎಂದು ಪೊಲೀಸರು ಕೇವಲ ಮಾತಿಗಷ್ಟೇ ಹೇಳಿದ್ರಾ. ಡೈಲಾಗ್ ಕೇವಲ ಹೇಮಂತ್ ನಿಂಬಾಳ್ಕರ್ ಮಾತ್ರ ಸೀಮಿತವಾಯ್ತಾ. ನೂತನ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಏನು ಮಾಡುತ್ತಿದ್ದಾರೆ ಎಂಬಿತ್ಯಾದಿ ಪ್ರಶ್ನೆ ಕಾಡುತ್ತಿದೆ.
ಒಟ್ಟಿನಲ್ಲಿ ಪೊಲೀಸರ ವಾರ್ನಿಂಗ್ ಗೂ ರೌಡಿಗಳು ಕ್ಯಾರೆ ಎಂದಿಲ್ಲ. ಮೇಲಿಂದ ಮೇಲೆ ಕ್ರೈಂ ಚಟುವಟಿಕೆಗಳು ನಡೆಯುತ್ತಲೇ ಇವೆ. ಇನ್ನಾದ್ರೂ ಬೆಂಗಳೂರು ಪೊಲೀಸ್ರು ಎಚ್ಚೆತ್ತುಕೊಳ್ಳಬೇಕಿದೆ. ಕೇವಲ ಡೈಲಾಗ್ ಹೊಡೆದು ಸುಮ್ಮನಾಗುವುದಲ್ಲ. ಅದನ್ನು ಹೇಮಂತ್ ನಿಂಬಾಳ್ಕರ್ ಸಾಯಬ್ರು ಕಾರ್ಯ ರೂಪಕ್ಕೆ ತಂದು ಭೂಗತ ಲೋಕವನ್ನು ಬುಡದ ಸಮೇತ ಕೀಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.