ಮೂತ್ರ ವಿಸರ್ಜನೆ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ: ಬೆಂಗಳೂರಿನ ಹಾಸ್ಟೆಲ್ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ ವಾರ್

Published : Mar 24, 2017, 06:53 AM ISTUpdated : Apr 11, 2018, 12:51 PM IST
ಮೂತ್ರ ವಿಸರ್ಜನೆ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ: ಬೆಂಗಳೂರಿನ ಹಾಸ್ಟೆಲ್ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ ವಾರ್

ಸಾರಾಂಶ

ಹಾಸ್ಟೆಲ್ ಒಂದರಲ್ಲಿ ಕಾಲೇಜು ಹುಡುಗರ ಮಧ್ಯೆ ನಡೆದ ಗ್ಯಾಂಗ್ ವಾರ್'ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಅಂಜನಾನಗರದ ಬಳಿಯ ದೇವರಾಜ ಅರಸು ಸರ್ಕಾರಿ ಹಾಸ್ಟೆಲ್ ನಲ್ಲಿ ನಡೆದಿದೆ. ರೋಹಿತ್ ಮೃತ ವಿದ್ಯಾರ್ಥಿಯಾಗಿದ್ದು,  ಅಪರೇಷಪ್ಪ ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೆಂಗಳೂರು(ಮಾ.24): ಹಾಸ್ಟೆಲ್ ಒಂದರಲ್ಲಿ ಕಾಲೇಜು ಹುಡುಗರ ಮಧ್ಯೆ ನಡೆದ ಗ್ಯಾಂಗ್ ವಾರ್'ಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಅಂಜನಾನಗರದ ಬಳಿಯ ದೇವರಾಜ ಅರಸು ಸರ್ಕಾರಿ ಹಾಸ್ಟೆಲ್ ನಲ್ಲಿ ನಡೆದಿದೆ. ರೋಹಿತ್ ಮೃತ ವಿದ್ಯಾರ್ಥಿಯಾಗಿದ್ದು,  ಅಪರೇಷಪ್ಪ ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ನಿನ್ನೆ ರಾತ್ರಿ 10.30ರ ಸುಮಾರಿಗೆ ರವೀಶ್ ಎಂಬ ವಿದ್ಯಾರ್ಥಿ, ಕುಡಿದು ಬಂದು ಶೌಚಾಲಯದ ಬಾಗಿಲು ತೆರೆದಿಟ್ಟುಕೊಂಡು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ರೋಹಿತ್ ಪ್ರಶ್ನಿಸಿದ್ದು ಮಾತಿಗೆ ಮಾತು ಬೆಳೆದು ಗಲಾಟೆ ಶುರು ಆಗಿದೆ. ಈ ವೇಳೆ ರವೀಶ್ ಕುಡಿದ ಮತ್ತಿನಲ್ಲಿ ರೋಹಿತ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಡೆಯಲು ಬಂದ ಅಮರೇಷಪ್ಪ ಮೇಲೂ ಚಾಕುವಿನಿಂದ ಇರಿದಿದ್ದಾನೆ.

ನೆಲಮಂಗಲದ ಸೋಲೂರು ಮೂಲದ ರೋಹಿತ್ ಹಾಗೂ ಅಮರೇಷಪ್ಪ ಇಬ್ರು ಸಹ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದರು. ಇದಲ್ಲದೆ ರವೀಶ್ ವಿಜಯನಗರದ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದೆ. ಈ ಕುರಿತಂತೆ ಬ್ಯಾಡರಹಳ್ಳಿ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರವೀಶ್ ಗಾಗಿ ಬಲೆ ಬೀಸಿದ್ದಾರೆ.

ಮೂತ್ರ ವಿಸರ್ಜನೆ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ: ಬೆಂಗಳೂರಿನ ಹಾಸ್ಟೆಲ್ ವಿದ್ಯಾರ್ಥಿಗಳ ನಡುವೆ ಗ್ಯಾಂಗ್ ವಾರ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಪಿಕ್‌ನಿಕ್ ಹೊರಟ ಶಾಲಾ ವಿದ್ಯಾರ್ಥಿಗಳ ಬಸ್ ಅಪಘಾತ, ಹಲವರಿಗೆ ಗಾಯ
ವರ್ಷಾಂತ್ಯ, ಹೊಸವರ್ಷದ ಸಂಭ್ರಮ ಹಾಳು ಮಾಡುವ ಘೋರ ದುರಂತಗಳು, ಡಿಸೆಂಬರ್‌-ಜನವರಿಯಲ್ಲೇ ಅಪಘಾತ ಆಗೋದ್ಯಾಕೆ?