
ಬೆಂಗಳೂರು: ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲಿನ ಐಟಿ ರೇಡ್'ನಿಂದ ಭಾರತೀಯ ಜನತಾ ಪಕ್ಷಕ್ಕೆ ಲಾಭವೆಷ್ಟು? ಈ ಬಗ್ಗೆ ಮಿಶ್ರ ಅಭಿಪ್ರಾಯಗಳಿವೆ. ರೇಡ್ ಆದ ಸಂದರ್ಭವು ಬಿಜೆಪಿಗೆ ಮುಳುವಾಗಬಹುದು ಎಂಬ ಮಾತು ಪ್ರಬಲವಾಗಿ ಕೇಳಿಬರುತ್ತಿದೆ. ಪ್ರಕರಣದಲ್ಲಿ ಬಿಜೆಪಿಗೂ ಲಾಭವಾಗುವ ಸಂಗತಿಗಳಿವೆ ಎಂಬ ಮಾತೂ ಇದೆ. ಬಿಜೆಪಿಗೆ ಆಗುವ ಲಾಭ ಮತ್ತು ನಷ್ಟಗಳನ್ನು ನೋಡುವುದಾದರೆ....
1) ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇದೇ ತಿಂಗಳ 123ರಿಂದ 3 ದಿನ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಶಾ ಆಗಮಿಸುವ ಮೊದಲೇ ರಾಜ್ಯ ಕಾಂಗ್ರೆಸ್ಸಿನಲ್ಲಿಯ ಇತರ ನಾಯಕರಿಗೆ ಈ ಪ್ರಕರಣದಿಂದ ಆತಂಕ ಸೃಷ್ಟಿಯಾಗಿ, ಕೆಲವರು ಬಿಜೆಪಿಯತ್ತ ದೃಷ್ಟಿ ಹಾಯಿಸಬಹುದು
2) ಪ್ರಸಕ್ತ ಸಂದರ್ಭದಲ್ಲಿ ಕಾಂಗ್ರೆಸ್ ದಿನೇ ದಿನೇ ಬಲಗೊಳ್ಳುತ್ತಿದ್ದು ‘ಕಾಂಗ್ರೆಸ್ ಮುಕ್ತ ಕರ್ನಾಟಕ’ದ ಬಿಜೆಪಿ ಕನಸಿಗೆ ಅಡ್ಡಿಯಾಗಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದ ವರ್ಚಸ್ಸು ಕುಸಿಯುವಂತೆ ಮಾಡಬೇಕು ಎಂಬ ಆಶಯ ಈ ಪ್ರಕರಣದಿಂದ ಈಡೇರಬಹುದು
3) ಡಿಕೆಶಿ ವರ್ಚಸ್ಸು, ನಾಯಕತ್ವಕ್ಕೆ ಧಕ್ಕೆ ಉಂಟಾದಲ್ಲಿ ಅಥವಾ ಕಪ್ಪು ಚುಕ್ಕೆ ಉಂಟಾದಲ್ಲಿ ಅದು ಬಿಜೆಪಿಗೆ ನೆರವಾಗಬಹುದು ಎಂಬ ನಿರೀಕ್ಷೆ ಪಕ್ಷಕ್ಕೆ.
4) ಡಿಕೆಶಿ ಒಕ್ಕಲಿಗ ಮುಖಂಡ. ಆದರೆ ದಾಳಿಯಿಂದಾಗಿ ಅವರ ವರ್ಚಸ್ಸು ಕುಂದಿ ಬಿಜೆಪಿಯಲ್ಲಿನ ಒಕ್ಕಲಿಗ ನಾಯಕರು ಲಾಭ ಪಡೆದುಕೊಳ್ಳಬಹುದು. ಒಕ್ಕಲಿಗ ಮತ ಸೆಳೆಯಬಹುದು
5) ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಮತ್ತು ಲಿಂಗಾಯತ್ರ ಧರ್ಮ ವಿವಾದಗಳಿಂದಾಗಿ ಬಿಜೆಪಿಗೆ ತುಸು ಹಿನ್ನಡೆ ಆಗಿತ್ತು. ಇದೀಗ ಡಿಕೆಶಿ ಪ್ರಕರಣ ಬಿಜೆಪಿಗೆ ಮರುಜೀವ ನೀಡಬಹುದು
6) ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ಕಾಂಗ್ರೆಸ್ಸಿನ ಖರ್ಚು ವೆಚ್ಚದ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸಲು ಸಜ್ಜಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಪ್ರಕರಣದಿಂದ ಶಿವಕುಮಾರ್ ಕುಗ್ಗಿದಲ್ಲಿ ಬಿಜೆಪಿಗೆ ಲಾಭವಾಗಬಹುದು
7) ಶಿವಕುಮಾರ್ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿಯಿಂದ ಕಾಂಗ್ರೆಸ್ಸಿನ ಇತರ ಆರ್ಥಿಕ ‘ಪ್ರಬಲ’ ನಾಯಕರು ಅಧೀರರಾಗಬಹುದು. ಚುನಾವಣೆಗಾಗಿ ಈಗಿನಿಂದಲೇ ಸಂಪನ್ಮೂಲ ಕ್ರೋಡೀಕರಿಸುವುದನ್ನು ಭಯದಿಂದ ಕೈಬಿಡಬಹುದು.
8) ಡಿಕೆಶಿ ಮೇಲೆ ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ದಾಳಿ ಮಾಡಿಸಿದೆ ಎಂದು ಕಾಂಗ್ರೆಸ್ ಪಕ್ಷ ಮನದಟ್ಟು ಮಾಡಿದಲ್ಲಿ ಬಿಜೆಪಿಗೆ ಮಳುವಾಗಬಹುದು.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.