
ಬೆಂಗಳೂರು (ಏ. 07): ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಶಾಕ್ ಕಾದಿದೆ. ಇಂದು ಮತ್ತೆ 200 ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಸಿದ್ದಲಿಂಗಪುರ ಗ್ರಾ.ಪಂ ವ್ಯಾಪ್ತಿಯ ಕಾರ್ಯಕರ್ತರು ಜೆಡಿಎಸ್’ಗೆ ಸೇರ್ಪಡೆಗೊಂಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ವಿರುದ್ಧ ತೊಡೆ ತಟ್ಟಿದ್ದಾರೆ ಜೆಡಿಎಸ್ನ ಜಿ.ಟಿ.ದೇವೇಗೌಡ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋಲುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸೋರಿಕೆ ವಿಚಾರವಾಗಿ ಜಿ ಟಿ ದೇವೇಗೌಡ ಪ್ರತಿಕ್ರಿಯಿಸುತ್ತಾ, ನಾನು ಬೆಳಿಗ್ಗೆಯಿಂದಲೂ ಜನರ ನಡುವೆ ಸೇರಿ ಪ್ರಚಾರ ಮಾಡುತ್ತಿದ್ದೇನೆ. ಗುಪ್ತಚರ ವರದಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಆದರೆ ಚಾಮುಂಡೇಶ್ವರಿ ಜನ ನನ್ನನ್ನ ಗೆಲ್ಲಿಸಬೇಕು ಎಂದು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಐದು ದಿನ ಪ್ರಚಾರ ಮಾಡಿಸಿದರೂ ಏನೂ ಪ್ರಯೋಜನವಾಗಲಿಲ್ಲ. ನಿನ್ನೆ ನಡೆದ ಒಕ್ಕಲಿಗರ ಸಭೆ ಸಂಪೂರ್ಣ ವಿಫಲವಾಗಿದೆ. ಸಭೆಗೆ ಒಕ್ಕಲಿಗರು ಸೇರದೇ ಇದ್ದದ್ದು ಕಂಡು ಸಿದ್ದರಾಮಯ್ಯ ಜಾತಿ ಸಭೆ ಅಲ್ಲ ಎಂದಿದ್ದಾರೆ. ಸ್ಲಂ ಜನಗಳನ್ನು ಸಭೆಗೆ ಕರೆದುಕೊಂಡು ಬಂದಿದ್ದರು ಎಂದು ಹೇಳಿದ್ದಾರೆ.
ಬೈ ಎಲೆಕ್ಷನ್’ನಲ್ಲಿ ನಾನು ಪ್ರಚಾರ ಮಾಡಿದ್ದರೆ ಸಿದ್ದರಾಮಯ್ಯ ಸೋಲುತ್ತಿದ್ದರು. 1983 ರಿಂದ 2004 ರ ವರೆಗೆ ಜಿಟಿ.ದೇವೇಗೌಡ ಬೆನ್ನೆಲುಬಾಗಿ ನಿಂತು ಸಿದ್ದರಾಮಯ್ಯರನ್ನ ಗೆಲ್ಲಿಸಿದ್ದರು. ಈಗ ಜಿಟಿ.ದೇವೇಗೌಡ ಅವರ ಜೊತೆ ಇಲ್ಲ, ಹೀಗಾಗಿ ಅವರ ಸೋಲು ಶತಸಿದ್ದ. ನಮ್ಮ ನಾಯಕ ಕುಮಾರಣ್ಣ ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿಯುತ್ತಾರೆ. ಆಗ ನೀವೇ ಜನರನ್ನ ನೋಡಿ ಹೇಳುತ್ತೀರಾ ಬನ್ನಿ ಎಂದು ಸಿಎಂ ವಿರುದ್ಧ ಕಿಡಿಕಾರಿದ ಜಿ ಟಿ ದೇವೆಗೌಡ ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.