
ಬೆಂಗಳೂರು(ಜೂನ್ 10): ಪೊಲೀಸ್ ಇಲಾಖೆಯಲ್ಲಿ "ಆರ್ಡರ್ಲಿ" ಹೆಸರಿನಲ್ಲಿ ಅಸ್ತಿತ್ವದಲ್ಲಿರುವ ಜೀತಪದ್ಧತಿ ಬಗ್ಗೆ ಸುವರ್ಣನ್ಯೂಸ್ ವರದಿ ಮಾಡಿದ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಆರ್ಡರ್ಲಿ ವ್ಯವಸ್ಥೆ ಇನ್ನೂ ಜಾರಿಯಲ್ಲಿರುವ ವಿಷಯ ಅವರಿಗೇ ಗೊತ್ತಿಲ್ಲವಂತೆ. ಹಾಗಂತ ಅವರು ಸುವರ್ಣನ್ಯೂಸ್'ಗೆ ರಿಯಾಕ್ಷನ್ ಕೊಟ್ಟಿದ್ದಾರೆ.
ಆರ್ಡರ್ಲಿ ಪದ್ಧತಿಯನ್ನು ರಾಜ್ಯ ಸರಕಾರವೇ ರದ್ದು ಮಾಡಿದೆ. ಆದರೆ, ಆರ್ಡರ್ಲಿ ಇನ್ನೂ ಜಾರಿಯಲ್ಲಿರುವುದು ತಮಗೆ ಗೊತ್ತಿಲ್ಲ. ಗಮನಕ್ಕೆ ಬಂದ ಕೂಡಲೇ ನಿಲ್ಲಿಸೋಕೆ ಹೇಳ್ತೀನಿ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ಸಹಾಯಕ ಸಿಬ್ಬಂದಿಯ ಅಗತ್ಯವಿದೆ. ಆರ್ಡರ್ಲಿ ಬದಲು "ಫಾಲೋಯರ್ಸ್"(Followers) ಹುದ್ದೆ ಸೃಷ್ಟಿಸಲಾಗುವುದು. ಆರ್ಡರ್ಲಿಯಾಗಿದ್ದವರನ್ನು ಫಾಲೋಯರ್ಸ್ ಆಗಿ ನೇಮಕ ಮಾಡಲಾಗುವುದು ಎಂದು ಪರಮೇಶ್ವರ್ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಒಟ್ಟು 3 ಸಾವಿರ ಜನರು ಆರ್ಡರ್ಲಿಯಾಗಿ ಕೆಲಸ ಮಾಡುತ್ತಿರುವುದು ತಿಳಿದುಬಂದಿದೆ.
ಏನಿದು ಆರ್ಡರ್ಲಿ ವ್ಯವಸ್ಥೆ?
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಹಾಯಕರಾಗಿ ಜೂನಿಯರ್ ಪೊಲೀಸ್ ಪೇದೆಗಳನ್ನು ಆರ್ಡರ್ಲಿಗಳಾಗಿ ಇರಿಸಲಾಗುತ್ತದೆ. ಪೊಲೀಸ್ ಅಧಿಕಾರಿಗಳು ಹೊರಗೆ ಡ್ಯೂಟಿಗೆ ಹೋದಾಗ ಇವರು ಜೊತೆಗಿರುತ್ತಾರೆ. ಆಫೀಸ್ ಫೈಲ್'ಗಳನ್ನು ಮೈಂಟೇನ್ ಮಾಡುವುದು, ಸಂದೇಶಗಳನ್ನು ರವಾನಿಸುವುದು ಇತ್ಯಾದಿ ಹಿರಿಯ ಅಧಿಕಾರಿಗಳ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. ಆದರೆ, ಪೊಲೀಸ್ ಪೇದೆಯಾಗಿ ತರಬೇತಿ ಹೊಂದಿದ ಆರ್ಡರ್ಲಿ ಪೊಲೀಸರನ್ನು ಮನೆಯ ಕೆಲಸಕ್ಕಾಗಿ ಬಳಸಿಕೊಳ್ಳುವ ದುರ್'ಪರಂಪರೆ ಬೆಳೆದುಬಂದಿದೆ. ಮನೆಯಲ್ಲಿ ಬಟ್ಟೆ ಹೊಗೆಯುವುದು, ಮನೆ ಒರೆಸುವುದು, ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡುವುದು ಇತ್ಯಾದಿ ವೈಯಕ್ತಿಕ ಕೆಲಸಗಳಿಗೆ ಇವರ ದುರ್ಬಳಕೆಯಾಗುತ್ತಿದೆ. ಇಂಥ ಗುಲಾಮೀಯ ವ್ಯವಸ್ಥೆಯನ್ನು ನಿಲ್ಲಿಸಬೇಕೆಂಬ ಕೂಗು ಬಹಳ ಕಾಲದಿಂದ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.