ಕರ್ನಾಟಕ ಬಂದ್: ಏನೇನಿರುತ್ತೆ, ಏನಿರಲ್ಲ, ಯಾರು ಬೆಂಬಲ, ಮತ್ಯಾರು ನೀಡಲ್ಲ- ಫುಲ್ ಡಿಟೇಲ್ಸ್

Published : Jan 23, 2018, 09:31 PM ISTUpdated : Apr 11, 2018, 12:36 PM IST
ಕರ್ನಾಟಕ ಬಂದ್: ಏನೇನಿರುತ್ತೆ, ಏನಿರಲ್ಲ, ಯಾರು ಬೆಂಬಲ, ಮತ್ಯಾರು ನೀಡಲ್ಲ- ಫುಲ್ ಡಿಟೇಲ್ಸ್

ಸಾರಾಂಶ

ಕನ್ನಡ ಪರ  ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಬಂದ್ ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಒಂದೇ ವಾರದಲ್ಲಿ ಎರಡೆರಡು ಬಂದ್ ಬಂದಿರುವುದರಿಂದ ಸಾರ್ವಜನಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾಗುತ್ತಿದೆ.

ಜನವರಿ 25 ರ ಕರ್ನಾಟಕ ಬಂದ್ ಇರುತ್ತೋ.. ಇಲ್ಲವೋ.. ಅನ್ನೋ ಗೊಂದಲ ರಾಜ್ಯದ ಜನರಲ್ಲಿ ಕಾಡ ತೊಡಗಿದೆ.  ಹೌದು, ಬಂದ್'ಗೆ ಕನ್ನಡ ಪರ ಸಂಘಟನೆಗಳಲ್ಲಿಯೇ ಒಡಕು ಉಂಟಾಗಿದೆ. ಕೆಲ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರೆ, ಕೆಲ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇನ್ನು ಕೆಲ ಸಂಘಟನೆಗಳು ಬೆಂಬಲ ಸೂಚಿಸಬೇಕಾ ..? ಬೇಡವಾ ..?  ಅನ್ನೋ ಗೊಂದಲದಲ್ಲಿದ್ದಾರೆ. ಕರ್ನಾಟಕ ಬಂದ್ ಯಾರ ಬೆಂಬಲವಿದೆ. ಯಾರ ಬೆಂಬಲವಿಲ್ಲ ಅನ್ನೋ ಕುರಿತ ಡಿಟೇಲ್ ವರದಿ ಇಲ್ಲಿದೆ.

ರಾಜಕೀಯ ತಿರುವು ಪಡೆದ ಕರ್ನಾಟಕ ಬಂದ್

ಕನ್ನಡ ಪರ  ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಬಂದ್ ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಒಂದೇ ವಾರದಲ್ಲಿ ಎರಡೆರಡು ಬಂದ್ ಬಂದಿರುವುದರಿಂದ ಸಾರ್ವಜನಿಕ ವಲಯದಲ್ಲಿಯೂ ವಿರೋಧ ವ್ಯಕ್ತವಾಗುತ್ತಿದೆ. ಒಂದೆಡೆ ಕರ್ನಾಟಕ ಸಂಘಟನೆಗಳ ಒಕ್ಕೂಟ, ಅಖಿಲ ಕನ್ನಡ ಚಳವಳಿ ಸಮಿತಿ ಸೇರಿದಂತೆ ಕೆಲ ಸಂಘಟನೆಗಳು ಕರ್ನಾಟಕ ಬಂದ್'ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇನ್ನು ಕರ್ನಾಟಕ ರಕ್ಷಣಾ ವೇದಿಕೆ ನಾಳೆ ಸಭೆಯಲ್ಲಿ ಬೆಂಬಲ ಕೊಡಬೇಕಾ? ಬೇಡವಾ ಅನ್ನೋ  ತೀರ್ಮಾನಕ್ಕೆ ಬರಲಿದ್ದಾರೆ. ಇನ್ನೂ ಬಿಜೆಪಿ ಕೂಡ ಬಂದ್'ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು,ಈ ಬಂದ್ ಕಾಂಗ್ರೆಸ್ ನಿಯೋಜಿತವೆಂದು ಟೀಕಿಸಿದೆ.

ಏನೇನು ಇರುತ್ತೆ

ತುರ್ತು ಚಿಕಿತ್ಸೆ, ಮೆಡಿಕಲ್ ಸ್ಟೋರ್,ಅಗತ್ಯ ವಸ್ತುಗಳಾದ ಪೇಪರ್, ಹಾಲು, ತರಕಾರಿ,ಸಾರಿಗೆ ಸೇವೆ, ಮೆಟ್ರೋ

ಸಾಮಾನ್ಯವಾಗಿ ಬಂದ್ ಸಮಯದಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ. ಹೀಗಾಗಿ ತುರ್ತು ಚಿಕಿತ್ಸೆ, ಆರೋಗ್ಯ ಸೇವೆ , ಮೆಡಿಕಲ್ ಸ್ಟೋರ್, ಪೇಪರ್ , ಹಾಲು, ತರಕಾರಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಇನ್ನೂ ಸಾರಿಗೆ ಸೇವೆ ಯಾಥಾ ಪ್ರಕಾರ ಇರಲಿದೆ.

ಏನೇನು ಇರಲ್ಲ ..

ಖಾಸಗಿ ಶಾಲಾ, ಕಾಲೇಜ್, ಅಂಗಡಿ ಮುಂಗಟ್ಟು,ಎಪಿಎಂಸಿ ಮಾರುಕಟ್ಟೆಗಳು,ಚಲನಚಿತ್ರ ಮಂದಿರಗಳು

ಬಂದ್ ಗೆ ಖಾಸಗಿ ಶಾಲಾ ಕಾಲೇಜ್ ಗಳ ಒಕ್ಕೂಟ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಇನ್ನು ಸರ್ಕಾರಿ ಶಾಲೆ, ಕಾಲೇಜ್'ಗಳು ಬಂದ್'ಗೆ ಬೆಂಬಲ ಸೂಚಿಸಿಲ್ಲ. ಪರಿಸ್ಥಿತಿ ನೋಡಿಕೊಂಡು ರಜೆ ನೀಡುವ ಸಾಧ್ಯತೆ ಇದೆ. ಸಮಗ್ರ ನೀರಾವರಿಗಾಗಿ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಬ್ತವಾಗಲಿದೆ. ಇದಲ್ಲದೆ ಈಗಾಗಲೇ ಚಲಚಿತ್ರ ವಾಣಿಜ್ಯ ಮಂಡಳಿ ಬಂದ್ ಗೆ ಬೆಂಬಲ ಸೂಚಿಸಿರುವುದರಿಂದ 25 ರಂದು ಕನ್ನಡ ಚಲಚಿತ್ರ ಪ್ರದರ್ಶನ ಸ್ಥಗಿತಗೊಳ್ಳಲಿದೆ. ಸಮಗ್ರ ನೀರಾವರಿಗಾಗಿ ಹೋರಾಟ ನಡೆಯುತ್ತಿರುವುದರಿಂದ ರೈತ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡಲಿವೆ.

ಬೆಂಬಲ

ಕರ್ನಾಟಕ ರಕ್ಷಣಾ ವೇದಿಕೆ - ಪ್ರವೀಣ್ ಶೆಟ್ಟಿ ಬಣ

ಕನ್ನಡ ಚಳವಳಿ ವಾಟಳ್ ಪಕ್ಷ

ಹಸಿರು ಸೇನೆ ರೈತ ಸಂಘಟನೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ

ವಕೀಲರ ಸಂಘ

ಲಾರಿ ಮಾಲೀಕರ ಸಂಘ

ಬಿಬಿಎಂಪಿ ಕಾರ್ಮಿಕ ಸಂಘ

ಸಾಹಿತ್ಯ ಪರಿಷತ್

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ

ಕನ್ನಡ ಕ್ರಿಯಾ ಸಮಿತಿ

ಹೋಟೆಲ್ ಮಾಲೀಕ ಸಂಘ

ಎಪಿಎಂಪಿ ಯಾರ್ಡ್ ಮತ್ತು ಆರ್ ಎಂಸಿ ಯಾರ್ಡ್

ಹಮಾಲಿಗಳ ಸಂಘ

ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟಗಾರು

ರಾಜಕುಮಾರ್ ಅಭಿಮಾನಿಗಳ ಸಂಘ

ವಿರೋಧ  ಸಂಘಟನೆಗಳು

ಕರ್ನಾಟಕ ಸಂಘಟನೆಗಳ ಒಕ್ಕೂಟ-

ಅಖಿಲ ಕನ್ನಡ ಚಳವಳಿ ಸಮಿತಿ

ಕರ್ನಾಟಕ ರಕ್ಷಣಾ ವೇದಿಕೆ - ನಾರಾಯಣ ಗೌಡ ಬಣ

ಕರ್ನಾಟಕ ಕಾರ್ಮಿಕ ವೇದಿಕೆ

ಹಸಿರು ಕರ್ನಾಟಕ ರೈತ ಸೇನೆ

ಅಖಂಡ ಕಾರ್ಮಿಕರ ಸಂಘ

ಅಂಬೇಡ್ಕರ್ ಸೇನೆ

ಒಟ್ಟನಲ್ಲಿ ಈ ಬಾರಿಯ ಬಂದ್ ರಾಜ್ಯದ ಜನರಲ್ಲಿ ಸಾಕಷ್ಟು ಗೊಂದಲ ಉಂಟು ಮಾಡಿದೆ. ಒಂದೇ ವಾರದಲ್ಲಿ ಎರೆಡೆರಡು ಬಂದ್ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆ  ಯಾವ ರೀತಿ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?