ಡ್ರೈವಿಂಗ್ ಲೈಸೆನ್ಸ್’ನಲ್ಲಿ ತಾಯಿ ಹೆಸರನ್ನು ತುಂಬಲೂ ಅವಕಾಶ

By Suvarna Web DeskFirst Published Mar 25, 2018, 2:24 PM IST
Highlights

ದಿಲ್ಲಿ ಸರ್ಕಾರ ವಾಹನ ಚಾಲನಾ ಪರವಾನಿಗೆಯನ್ನು ಪಡೆದುಕೊಳ್ಳಲು ಇದೀಗ ತಾಯಿಯ ಹೆಸರನ್ನು ನಮೂದು ಮಾಡುವ ಅವಕಾಶವನ್ನು ನೀಡಿದೆ. 

ನವದೆಹಲಿ : ದಿಲ್ಲಿ ಸರ್ಕಾರ ವಾಹನ ಚಾಲನಾ ಪರವಾನಿಗೆಯನ್ನು ಪಡೆದುಕೊಳ್ಳಲು ಇದೀಗ ತಾಯಿಯ ಹೆಸರನ್ನು ನಮೂದು ಮಾಡುವ ಅವಕಾಶವನ್ನು ನೀಡಿದೆ. 

ಪರ್ಮನೆಂಟ್ ಲೈಸೆನ್ಸ್ ಪಡೆದುಕೊಳ್ಳಲು ಇಷ್ಟು ದಿನಗಳ ಕಾಲ ಗಂಡ ಅಥವಾ ತಂದೆಯ ಹೆಸರನ್ನು ತುಂಬಲು ಮಾತ್ರ ಅವಕಾಶವಿತ್ತು.

ಆದರೆ ಇದೀಗ ಚಾಲನಾ ಪರವಾನಗಿ ಪಡೆಯುವ ಅಪ್ಲಿಕೇಶನ್’ನಲ್ಲಿ  ತಾಯಿಯ ಹೆಸರನ್ನು ತುಂಬಲೂ ಕೂಡ ಅವಕಾಶವಿದೆ. ಡ್ರೈವಿಂಗ್ ಲೈಸೆನ್ಸ್’ನ್ನೂ ಕೂಡ ಅತ್ಯಂತ ಪ್ರಮುಖ ಗುರುತಿನ  ದಾಖಲೆಯಾಗಿ ಬಳಸಲಾಗುತ್ತದೆ.

click me!