ಮಕ್ಕಳಿಗೆ ಮೊಬೈಲ್ ಬ್ಯಾನ್

By Web DeskFirst Published Aug 2, 2018, 10:44 AM IST
Highlights

ಮಕ್ಕಳ ಕೈಲಿ ಮೊಬೈಲ್ ಕೊಟ್ಟರೆ ಅವರಿಗೆ ಪ್ರಪಂಚವೇ ಮರೆತು ಹೋಗುತ್ತದೆ. ಆದ್ದರಿಂದ ಸರ್ಕಾರ ಇದೀಗ ಕಠಿಣ ಕ್ರಮ ಕೈಗೊಂಡಿದ್ದು ಮಕ್ಕಳಿಗೆ ಮೊಬೈಲ್ ಬ್ಯಾನ್ ಮಾಡಿದೆ. 

ಪ್ಯಾರಿಸ್: ಮಕ್ಕಳಿಗೆ ಸ್ಮಾರ್ಟ್‌ಫೋನ್ ಕೈಲಿದ್ದರೆ ಬೇರೆ ಪ್ರಪಂಚವೇ  ಇಲ್ಲ. ಇಡೀ ದಿನ ಅದರಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾನ್ಸ್ ಸರ್ಕಾರ ಮಕ್ಕಳು ಶಾಲೆಗಳಲ್ಲಿ ಮಕ್ಕಳು ಸ್ಮಾರ್ಟ್‌ಫೋನ್ ಬಳಸುವುದಕ್ಕೆ ನಷೇಧ ಹೇರಿದೆ. ಶಾಲೆಗೆ ಬರುವಾಗ  ಮಕ್ಕಳು ಸ್ಮಾರ್ಟ್‌ಫೋನ್‌ಗಳನ್ನು ಮನೆಯಲ್ಲೇ ಬಿಟ್ಟುಬರಬೇಕು ಎಂಬ ನಿಯಮ ರೂಪಿಸಿದೆ. ಈ ನಿಯಮವನ್ನು ಜಾರಿಗೆಗೊಳಿಸಬೇಕೇ ಬೇಡವೇ ಎಂಬ ಆಯ್ಕೆಯನ್ನು ಹೈಸ್ಕೂಲಿನ ವಿವೇಚನೆಗೆ ಬಿಡಲಾಗಿದೆ. 

ಮೊಬೈಲ್ ಫೋನ್ ಬಳಕೆಯಿಂದ ಮಕ್ಕಳು ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ಹೀಗಾಗಿ ಮಕ್ಕಳ ರಕ್ಷಣೆಗಾಗಿ ಕಾನೂನು ರೂಪಿಸಿದ್ದೇವೆ ಎಂದು ಫ್ರಾನ್ಸ್ ಶಿಕ್ಷಣ ಸಚಿವರು ಹೇಳಿದ್ದಾರೆ. ಈ ಹಿಂದೆ ಫ್ರಾನ್ಸ್‌ನಲ್ಲಿ ಶಿಕ್ಷಕರು ತರಗತಿಯಲ್ಲಿ ಇದ್ದಾಗ ಸ್ಮಾರ್ಟ್‌ಫೋನ್ ಬಳಸಬಾರದು ಎಂಬ ನಿಯಮವನ್ನು ರೂಪಿಸಲಾಗಿತ್ತು. 

click me!