ಪಾಕ್ ಪೈಲೆಟ್‌ಗಳಿಗೆ ರಫೆಲ್ ತರಬೇತಿ: ಶುದ್ಧ ಸುಳ್ಳೆಂದ ಫ್ರಾನ್ಸ್!

By Web DeskFirst Published Apr 11, 2019, 5:20 PM IST
Highlights

ಪಾಕ್ ಪೈಲೆಟ್‌ಗಳಿಗೆ ರಫೆಲ್ ಯುದ್ಧ ವಿಮಾನ ಹಾರಾಟ ತರಬೇತಿ ವಿಚಾರ| ಶುದ್ಧ ಸುಳ್ಳು ಸುದ್ದಿ ಎಂದ ಫ್ರಾನ್ಸ್ ಸರ್ಕಾರ| ಭಾರತದ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಕ್ಲೈಲರ್ ಟ್ವೀಟ್| ಕತಾರ್ ವಾಯುಸೇನೆಗೆ ನೀಡಿದ್ದ ತರಬೇತಿಯಲ್ಲಿ ಪಾಕ್ ಪೈಲೆಟ್ಸ್ ಶಾಮೀಲು?| ainonline.com ವರದಿ ತಳ್ಳಿ ಹಾಕಿದ ಫ್ರಾನ್ಸ್| 

ನವದೆಹಲಿ(ಏ.11): 2017ರಲ್ಲಿ ಪಾಕಿಸ್ತಾನ ವಾಯುಸೇನೆ ಪೈಲೆಟ್‌ಗಳಿಗೆ ರಫೆಲ್ ಯುದ್ಧ ವಿಮಾನ ಹಾರಾಟ ತರಬೇತಿ ನೀಡಲಾಗಿದೆ ಎಂಬ ಸುದ್ದಿಯನ್ನು ಫ್ರಾನ್ಸ್ ಸರ್ಕಾರ ಸ್ಪಷ್ಟವಾಗಿ ತಳ್ಳಿ ಹಾಕಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಕ್ಲೈಲರ್, ಪಾಕ್ ಪೈಲೆಟ್‌ಗಳಿಗೆ ರಫೆಲ್ ತರಬೇತಿ ನೀಡಲಾಗಿದೆ ಎಂಬುದು ಶುದ್ಧ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ.

I can confirm that it is fake news. https://t.co/3XpPnfPqUc

— Alexandre Ziegler (@FranceinIndia)

ಕಳೆದ ಫೆಬ್ರವರಿ 6ರಂದು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಕತಾರ್‌ಗೆ ರಫೆಲ್ ಯುದ್ಧ ವಿಮಾನಗಳನ್ನು ಪೂರೈಸಿದ್ದು, 2017ರಲ್ಲಿ ಕತಾರ್‌ನ ವಾಯುಸೇನೆಯ ತಂಡಕ್ಕೆ ನೀಡಿದ ರಫೆಲ್ ಹಾರಾಟ ತರಬೇತಿಯಲ್ಲಿ ಪಾಕಿಸ್ತಾನ ಪೈಲಟ್‌ಗಳು ಗಳು ತರಬೇತಿ ಪಡೆದಿದ್ದಾರೆ ಎಂದು ಹೇಳಲಾಗಿತ್ತು. 

ಈ ಕುರಿತು ಸುದ್ದಿ ಪ್ರಕಟಿಸಿದ್ದ ‌ಆನ್‌ಲೈನ್ ಸುದ್ದಿ ಸಂಸ್ಧೆ ainonline.com, ಪಾಕ್ ಪೈಲೆಟ್‌ಗಳಿಗೆ ಫ್ರಾನ್ಸ್‌ನಲ್ಲಿ ರಫೆಲ್ ತರಬೇತಿ ನೀಡಲಾಗಿದೆ ಎಂದು ವಾದಿಸಿತ್ತು.

click me!