ಕುಡಿಯಲು ನೀರು ಕೊಡದ ಕೆಎಫ್ಸಿ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಕಾರ್ಯಕರ್ತೆಗೆ ಜಯ: ಉಚಿತ ನೀರು ಗ್ರಾಹಕರ ಹಕ್ಕು!

Published : Apr 24, 2017, 05:39 AM ISTUpdated : Apr 11, 2018, 12:43 PM IST
ಕುಡಿಯಲು ನೀರು ಕೊಡದ ಕೆಎಫ್ಸಿ ವಿರುದ್ಧದ ಹೋರಾಟದಲ್ಲಿ ಸಾಮಾಜಿಕ ಕಾರ್ಯಕರ್ತೆಗೆ ಜಯ: ಉಚಿತ ನೀರು ಗ್ರಾಹಕರ ಹಕ್ಕು!

ಸಾರಾಂಶ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯ ಎಲ್ಲಾ ಮಲ್ಟಿಪ್ಲೆಕ್ಸ್‌, ರೆಸ್ಟೋರೆಂಟ್‌, ಉಪಾಹಾರ ಗೃಹಗಳಲ್ಲಿ ವರ್ಷದ 365 ದಿನ ಗಳ ಕಾಲ ಗ್ರಾಹಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳ ಬೇಕು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗೆ ಗ್ರಾಹಕರ ಹಕ್ಕುಗಳ ನ್ಯಾಯಾ ಲಯ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಬೆಂಗಳೂರು(ಎ.24): ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯ ಎಲ್ಲಾ ಮಲ್ಟಿಪ್ಲೆಕ್ಸ್‌, ರೆಸ್ಟೋರೆಂಟ್‌, ಉಪಾಹಾರ ಗೃಹಗಳಲ್ಲಿ ವರ್ಷದ 365 ದಿನ ಗಳ ಕಾಲ ಗ್ರಾಹಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಸಿಗುವಂತೆ ನೋಡಿಕೊಳ್ಳ ಬೇಕು ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗೆ ಗ್ರಾಹಕರ ಹಕ್ಕುಗಳ ನ್ಯಾಯಾ ಲಯ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಅಲ್ಲದೆ, ನಗರದ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಉಚಿತ ನೀರಿನ ಸೌಲಭ್ಯ ಕಲ್ಪಿಸುವ ಸಂಬಂಧ ಮುಂದಿನ 2 ತಿಂಗಳಲ್ಲಿ ಪರಿಶೀಲನೆ ನಡೆಸಿ, ನ್ಯಾಯಾಲಯದ ಆದೇಶ ಪಾಲಿಸಿರುವ ಕುರಿತು ಅನುಷ್ಠಾನ ವರದಿಯನ್ನು ಮುಂದಿನ 2 ತಿಂಗಳಲ್ಲಿ ಸಲ್ಲಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಆದೇಶಿಸಿದೆ. 

ಉಚಿತವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದ ನಗರದ ಪ್ರತಿಷ್ಠಿತ ರೆಸ್ಟೋ ರೆಂಟ್‌ ಕೆಎಫ್‌ಸಿ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಸುಧಾ ಕೊತ್ವ ಎಂಬುವರು ದೂರು ಸಲ್ಲಿಸಿದ್ದರು. ಈ ಸಂಬಂಧ ವಿಚಾ ರಣೆ ನಡೆಸಿದ ಗ್ರಾಹಕರ ಹಕ್ಕುಗಳ ನ್ಯಾಯಾ ಲಯದ ಅಧ್ಯಕ್ಷ ಪಿ.ವಿ. ಸಿಂಗ್ರಿ, ಸದಸ್ಯರಾದ ಎಂ.ಯಶೋಧಮ್ಮ ಮತ್ತು ಪಿ.ಕೆ.ಶಾಂತಾ ಅವರಿದ್ದ ವಿಭಾಗೀಯ ಪೀಠ ನೀರು ಸೌಲಭ್ಯ ಕಲ್ಪಿಸುವಂತೆ ಆದೇಶ ನೀಡಿದೆ. ಅಲ್ಲದೆ, ಪ್ರಕ ರಣ ಸಂಬಂಧ ಅರ್ಜಿದಾರರಿಗೆ ಪರಿಹಾರವಾಗಿ .1 ಸಾವಿರ, ಕಾನೂನು ಹೋರಾಟದ ವೆಚ್ಚವಾಗಿ .5 ಸಾವಿರ ನೀಡಲು ಸೂಚಿಸಿದೆ. ಈ ಆದೇಶ ದಿಂದಾಗಿ ಬಾಟಲ್‌ ನೀರನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದ ಮಲ್ಟಿಪ್ಲೆಕ್ಸ್‌, ರೆಸ್ಟೋರೆಂಟ್‌ ಮತ್ತು ಉಪಾ ಹಾರ ಗೃಹಗಳಲ್ಲಿ ಗ್ರಾಹಕರಿಗೆ ಉಚಿತ ವಾಗಿ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇ ಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಮುಂಬೈ ಮಹಾನಗರ ಪಾಲಿಕೆ 2015ರ ನವೆಂಬರ್‌ 30ರಂದು ಎಲ್ಲಾ ಮಲ್ಟಿಪ್ಲೆಕ್ಸ್‌, ರೆಸ್ಟೋರೆಂಟ್‌ ಮತ್ತು ಉಪಾಹಾರ ಗೃಹ ಗಳಲ್ಲಿ ವರ್ಷ ಪೂರ್ತಿ ಗ್ರಾಹಕರಿಗೆ ಉಚಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡ ಬೇಕು ಎಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿನ ಕೆಎಫ್‌ಸಿ, ಮ್ಯಾಕ್‌ ಡೊನಾಲ್ಡ್‌, ಬರಿಸ್ತಾ ಕೆಫೆ, ಸ್ಟಾರ್‌ಬಕ್ಸ್‌, ಕೆಫೆ ಕಾಫಿ ಡೇಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿ ಕಾರಿಗಳಿಗೆ ಆದೇಶಿಸಿದೆ.

ನೀರು ಕೊಡದ ಕೆಎಫ್‌ಸಿ:

ಪ್ರಕರಣ ಸಂಬಂಧಿಸಿದಂತೆ ದೂರ ನೀಡಿರುವ ಸುಧಾ ಕೊತ್ವ, ಯಶವಂತಪುರದ ಬಿಗ್‌ಬಜಾರ್‌ ಬಳಿಯಿರುವ ಕೆಎಫ್‌ಸಿ ರೆಸ್ಟೋರೆಂಟ್‌ಗೆ ಸಂಬಂಧಿಕರೊಂದಿಗೆ 2016ರ ಮೇ 29 ರಂದು ಭೇಟಿ ನೀಡಿದ್ದರು. ಊಟ ಮುಗಿಸಿದ ಬಳಿಕ ಕುಡಿಯಲು ನೀರು ಕೊಡುವಂತೆ ಸಿಬ್ಬಂದಿಯನ್ನು ಕೇಳಿದರೂ ನೀರು ಕೊಡಲಿಲ್ಲ. ರೆಸ್ಟೋರೆಂಟ್‌ನ ಒಳ ಭಾಗದಲ್ಲಿ ಹುಡುಕಿ ದಾಗ ಎಲ್ಲಿಯೂ ಕುಡಿಯಲು ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಸಿಬ್ಬಂದಿಯನ್ನು ಮತ್ತೊಮ್ಮೆ ನೀರಿನ ಬಗ್ಗೆ ವಿಚಾರಿಸಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡದೇ ಹಣ ಕೊಟ್ಟು ಬಾಟಲ್‌ ನೀರು ಪಡೆಯುವಂತೆ ಸಲಹೆ ನೀಡಿದ್ದರು. ರೆಸ್ಟೋರೆಂಟ್‌ಗಳಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರು ಪಡೆ ಯುವುದು ಪ್ರತಿಯೊಬ್ಬ ಗ್ರಾಹಕರ ಹಕ್ಕು, ಕುಡಿಯುವುದಕ್ಕೆ ನೀರು ಕೊಡಬೇಕು ಎಂದು ಸುಧಾ ಒತ್ತಾಯಿಸಿದರೂ ಪ್ರಯೋಜನವಾಗಿರಲಿಲ್ಲ.

ಇದರಿಂದಾಗಿ ಅಸಮಾಧಾನಗೊಂಡಿದ್ದ ಸುಧಾ, ಪಾಲಿಕೆಯ ಮುಖ್ಯ ಆರೋಗ್ಯಾಧಿಕಾ ರಿಯಾಗಿದ್ದ ಡಾ. ವತ್ಸಲಾ ಅವರಿಗೆ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ರೆಸ್ಟೋರೆಂಟ್‌ ಮಾಲೀಕರೊಂದಿಗೆ ಶಾಮೀಲಾಗಿ ಈ ಬಗ್ಗೆ ಕ್ರಮಕ್ಕೆ ಮುಂದಾಗಲಿಲ್ಲ ಎಂದು ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ
ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!