
ನವದೆಹಲಿ: ಬೆಂಗಳೂರು ಮೂಲದ ಈ ದಂಪತಿ ಪರಸ್ಪರ ಜಗಳವಾಡಿ ಎಷ್ಟು ಕೇಸು ಒಬ್ಬರ ಮೇಲೊಬ್ಬರು ಹಾಕಿಕೊಂಡಿದ್ದಾರೆ ಎಂದರೆ, ಇದು ಸುಪ್ರೀಂ ಕೋರ್ಟ್'ಗೇ ಅಚ್ಚರಿ ತಂದಿದೆಯಂತೆ! ಹೌದು.. ಈ ದಂಪತಿ ಒಟ್ಟು 67 ಕೇಸುಗಳನ್ನು ಒಬ್ಬರ ಮೇಲೊಬ್ಬರು ಜಡಿದಿದ್ದಾರೆ.
ಅಮೆರಿಕ ನಾಗರಿಕತ್ವ ಹೊಂದಿರುವ ಟೆಕ್ಕಿಯೊಬ್ಬರು 2002ರಲ್ಲಿ ಬೆಂಗಳೂರು ಮಹಿಳೆಯನ್ನು ವಿವಾಹವಾಗಿದ್ದರು. 2009ರಲ್ಲಿ ಈ ದಂಪತಿಗೆ ಮಗು ಜನಿಸಿತು. ಆದರೆ ಬಳಿಕ ಇದ್ದಕ್ಕಿದ್ದಂತೆ ಇವರ ಸಂಬಂಧ ಹಳಸಿತು. ಗಂಡನು ಪತ್ನಿಯ ಮೇಲೆ 58 ದೂರುಗಳನ್ನು ದಾಖಲಿಸಿದರೆ, ಗಂಡನನ್ನು ಬಿಟ್ಟು ಮಗುವಿನೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪತ್ನಿ 9 ಪ್ರಕರಣ ದಾಖಲಿಸಿದಳು. ಈ ಪ್ರಕರಣಗಳು ವರದಕ್ಷಿಣೆ ಕಿರುಕುಳ, ಗೃಹ ಹಿಂಸೆ, ಮಗುವಿನ ಹಕ್ಕು ಯಾರಿಗೆ ಸೇರಿದ್ದು.. ಎಂಬಿತ್ಯಾದಿಗಳ ಕುರಿತಾಗಿವೆ.
ತನ್ನ ಪತ್ನಿ ಮಗುವನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಇದರಿಂದ ತಾನು ಮಗುವಿನ ಪ್ರೀತಿಯಿಂದ ವಂಚಿತನಾಗಿರುವೆ ಎಂದು ಪತಿ ಈಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಪರಸ್ಪರರು ದಾಖಲಿಸಿಕೊಂಡ ಕೇಸುಗಳನ್ನು ನೋಡಿ ನ್ಯಾಯಾಧೀಶರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.