
ನವದೆಹಲಿ(ಫೆ.21): ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಅರೆಸೇನಾ ಪಡೆಗಳಿಗೂ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ.
ಈ ಕುರಿತು ಇಂದು ಗೃಹ ವ್ಯವಹಾರಗಳ ಸಚಿವಾಲಯ ಆದೇಶದ ಹೊರಿಡಿಸಿದ್ದು, ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಸಿಆರ್ಪಿಎಫ್ ಸೇರಿದಂತೆ ಎಲ್ಲಾ ಅರೆಸೇನಾ ಪಡೆಗಳ ಸೈನಿಕರೂ ಕೂಡ ಕಮರ್ಷಿಯಲ್ ಫ್ಲೈಟ್ ಬಳಸಬಹುದಾಗಿದೆ ಎಂದು ತಿಳಿಸಿದೆ.
ರಜೆಯ ಮೇಲೆ ಹೋಗುವಾಗ ಹಾಗೂ ರಜೆ ಮುಗಿಸಿ ಕರ್ತವ್ಯಕ್ಕೆ ಮರಳುವಾಗ ಈ ಯೋಧರು ದೆಹಲಿ-ಶ್ರೀನಗರ, ಜಮ್ಮು-ಶ್ರೀನಗರದ ಮಾರ್ಗಗಳಲ್ಲಿ ತಮ್ಮಿಷ್ಟದ ವಿಮಾನಗಳನ್ನು ಬಳಕೆ ಮಾಡಬಹುದಾಗಿದೆ.
ಪುಲ್ವಾಮ ಘಟನೆ ನಡೆದ ನಂತರ ಸೈನಿಕರನ್ನು ರಸ್ತೆಯ ಮೇಲೆ ಸಾಗಿಸುವ ಬದಲು ವಿಮಾನದಲ್ಲಿ ಕರೆದೊಯ್ಯಬಹುದಿತ್ತೆಂಬ ಸಲಹೆಗಳು ಮತ್ತು ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.