
ಚಾಮರಾಜನಗರ : ದೇವರ ಹೆಸರಿನಲ್ಲೂ ಕೋಟಿ ಕೋಟಿ ಹಣ ಲೂಟಿ ಮಾಡಿದ ಆರೋಪವೊಂದು ಕೇಳಿ ಬಂದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಿಂದ ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಲೂಟಿ ನಡೆದಿದೆ ಎನ್ನಲಾಗಿದೆ.
ಮಲೆ ಮಹಾದೇಶ್ವರ ದೇವಾಲಯದಲ್ಲಿ ಲೆಕ್ಕ ಅಧೀಕ್ಷಕನಾಗಿರುವ ಎಂ ಬಸವರಾಜು ಹಾಗೂ ಮಹೇಶ್ ಕುಮಾರ್ ಎನ್ನುವ ಇಬ್ಬರ ವಿರುದ್ಧ ಕೋಟಿ ಕೋಟಿ ಹಣ ಲೂಟಿ ಮಾಡಿದ ಆರೋಪದಲ್ಲಿ ಎಸಿಬಿಗೆ ದೂರು ನಿಡಲಾಗಿದೆ.
ಮಲೆ ಮಹದೇಶ್ವರ ದೇವಸ್ಥಾನದ ಪ್ರಾಧಿಕಾರದಲ್ಲಿ ಕೋಟಿಗಟ್ಟಲೇ ಅವ್ಯವಹಾರ ನಡೆಸಿದ್ದಾಗಿ ಬಿಜೆಪಿ ವಕ್ತಾರರಾದ ಎನ್.ಆರ್ ರಮೇಶ್ ದೂರು ಸಲ್ಲಿಸಿದ್ದಾರೆ.
ಬಸ್ ಗಳ ನಿರ್ವಹಣೆ, ವಿದ್ಯುತ್ ನಿರ್ವಹಣೆ ಹಾಗೂ ಅನ್ನ ದಾಸೋಹ ದಲ್ಲಿ ಅವ್ಯವಹಾರ ನಡೆದಿದೆ. ದವಸ ಧಾನ್ಯಗಳ ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.