ಉ.ಕ ಪ್ರತ್ಯೇಕತೆ ವಿಷಬೀಜ: ದೊಡ್ಡ ಗೌಡರಿಗೆ ಯಡಿಯೂರಪ್ಪ 3 ಪ್ರಶ್ನೆ!

Published : Aug 03, 2018, 01:55 PM IST
ಉ.ಕ ಪ್ರತ್ಯೇಕತೆ ವಿಷಬೀಜ: ದೊಡ್ಡ ಗೌಡರಿಗೆ ಯಡಿಯೂರಪ್ಪ 3 ಪ್ರಶ್ನೆ!

ಸಾರಾಂಶ

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ವಿಚಾರ! ದೇವೆಗೌಡರ ಹೇಳಿಕೆಗೆ ಗರಂ ಆದ ಯಡಿಯೂರಪ್ಪ! ದೊಡ್ಡ ಗೌಡರಿಗೆ 3 ಪ್ರಶ್ನೆ ಕೇಳಿದ ಯಡಿಯೂರಪ್ಪ! ಪ್ರತ್ಯೇಕತೆ ವಿಷಬೀಜ ಬಿತ್ತಿದ್ದು ಯಾರೆಂದು ಗೊತ್ತಿಲ್ವಾ?

ಬೆಂಗಳೂರು(ಆ.3): ಅಧಿಕಾರ ಸಿಗದೇ ಹತಾಶರಾದ ಕಾರಣ ಯಡಿಯೂರಪ್ಪ ಪ್ರತ್ಯೇಕ ಉತ್ತರ ಕರ್ನಾಟಕ ಎಂಬ ವಿಷ ಬೀಜ ಬಿತ್ತುತ್ತಿದ್ದಾರೆ ಎಂಬ ಮಾಜಿ ಪ್ರಧಾನಿ ದೇವೆಗೌಡರ ಹೇಳಿಕೆಗೆ ಯಡಿಯೂರಪ್ಪ ಗರಂ ಆಗಿದ್ದಾರೆ.

ದೇವೆಗೌಡರ ಹೇಳಿಕೆಗೆ ಸೂಕ್ತ ತಿರುಗೇಟು ನೀಡಿರುವ ಯಡಿಯೂರಪ್ಪ, ಅಧಿಕಾರಕ್ಕಾಗಿ ರಾಜ್ಯ ಹೋಳು ಮಾಡುವಷ್ಟು ಕೀಳು ಮಟ್ಟದ ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ ಎಂದು ಗುಡುಗಿದ್ದಾರೆ. ಅಧಿಕಾರಕ್ಕಾಗಿ ಅವಕಾಶವಾದಿ ಮೈತ್ರಿ ಮಾಡಿಕೊಂಡಿದ್ದು ಯಾರು ಎಂಬುದು ರಾಜ್ಯದ ಜನೆತೆಗೆ ಗೊತ್ತಿದೆ ಎಂದು ದೇವೆಗೌಡರ ವಿರುದ್ಧ ಯಡಿಯೂರಪ್ಪ ಹರಿಹಾಯ್ದರು.

ಬೆಂಗಳೂರಿನ ಡಾಲರ್ಸ್ ಕಾಲನಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ದೇವೆಗೌಡರಿಗೆ ಮೂರು ಪ್ರಶ್ನೆಗಳನ್ನು ಕೇಳಿದರು. ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ, ಈ ಹಿಂದೆ ಸಿಎಂ ಆಗಿದ್ದ ಲಿಂಗಾಯತ ನಾಯಕರು ಉ.ಕ ಭಾಗಕ್ಕೆ ನೀಡಿದ ಕೊಡುಗೆ ಅಂತಾ ಕೇಳಿದ್ದರು. ಈ ಮೂಲಕ ಪ್ರತ್ಯೇಕತೆಯ ಬೀಜವನ್ನು ಸಿಎಂ ಅವರೇ ಬಿತ್ತಿದರು ಎಂಬುದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅದರಂತೆ ಚೆನ್ನಪಟ್ಟಣದಲ್ಲಿ ಮಾತನಾಡುತ್ತಾ, ಜಾತಿ ಮತ್ತು ಹಣದ ಆಮೀಷಕ್ಕೆ ಬಲಿಯಾಗಿ ಮತ ಹಾಕಿದ್ದೀರಿ ಎಂದು ಉ.ಕ. ಭಾಗದ ಜನರನ್ನು ಚುಚ್ಚಿದವರು ಸಿಎಂ ಕುಮಾರಸ್ವಾಮಿ ಅವರೇ. ಈ ಕುರಿತು ದೇವೆಗೌಡರಿಗೆ ಏನು ಗೊತ್ತಿಲ್ಲವೇ ಎಂದು ಯಡಿಯೂರಪ್ಪ ಸವಾಲು ಹಾಕಿದರು. ಅಲ್ಲದೇ ಉ.ಕ. ಭಾಗದಿಂದ ರಾಜ್ಯಕ್ಕೆ ಬರುವ ಆದಾಯ ಎಷ್ಟು ಎಂದು ಕೇಳಿದ ಕುಮಾರಸ್ವಾಮಿ ಅವರ ಕಿವಿ ಹಿಂಡುವ ಕೆಲಸ ನಿವೇಕೆ ಮಾಡಿಲ್ಲ ಎಂದು ಗೌಡರಿಗೆ ಸವಾಲು ಹಾಕಿದರು.

ಉ.ಕ ದಲ್ಲಿ ಅಶಾಂತಿ ನೆಲೆಸಲು ಸಿಎಂ ಕುಮಾರಸ್ವಾಮಿ ಅವರೇ ನೇರ ಕಾರಣರಾಗಿದ್ದು, ಅವರಿಗೆ ಬುದ್ದಿವಾದ ಹೇಳೊದು ಬಿಟ್ಟು ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಯಡಿಯೂರಪ್ಪ ಹರಿಹಾಯ್ದರು. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಬಿಟ್ಟು ತಮ್ಮ ಮಗನಿಂದ ರಾಜ್ಯ ಛಿದ್ರವಾಗದಂತೆ ನೋಡಿಕೊಳ್ಳುವುದು ದೇವೆಗೌಡರ ಜವಾಬ್ದಾರಿ ಎಂದು ಯಡಿಯೂರಪ್ಪ ಗುಡುಗಿದ್ದದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!