
ಬೆಂಗಳೂರು[ಆ.2] ಕನ್ನಡಪ್ರಭ ವಾರ್ತೆ ಬೆಂಗಳೂರು ಮಾಜಿ ಉಪರಾಷ್ಟ್ರಪತಿ ದಿವಂಗತ ಬಿ.ಡಿ.ಜತ್ತಿ ಅವರ ಕುಟುಂಬಕ್ಕೆ ಪೊಲೀಸರಿಂದಲೇ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ
ಕೇಳಿ ಬಂದಿದೆ. ಪ್ರಕರಣವೊಂದರಲ್ಲಿ ಪೊಲೀಸರು ಹಣ ನೀಡುವಂತೆ ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಿ.ಡಿ.ಜತ್ತಿ ಅವರ ಸೊಸೆ ಲಕ್ಷ್ಮಿ ಜತ್ತಿ ಆರೋಪಿಸಿದ್ದಾರೆ.
ಎಸಿಪಿ ಸೇರಿದಂತೆ ಕೆಲ ಪೊಲೀಸರ ವಿರುದ್ಧ ಅವರು ಕಿರುಕುಳದ ಆರೋಪ ಮಾಡಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಹೆಚ್ಚು ವರಿ ಪೊಲೀಸ್ ಆಯುಕ್ತ ಸೀಮಂತ್ ಸಿಂಗ್ ಅವರನ್ನು ಭೇಟಿಯಾಗಿ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದೇವೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅವರಿಗೆ ಲಿಖಿತ ದೂರು ನೀಡು ವಂತೆ ಸೂಚನೆ ನೀಡಿದ್ದಾರೆ ಎಂದು ಲಕ್ಷ್ಮಿ ಜತ್ತಿ ಅವರು ಸುವರ್ಣ ನ್ಯೂಸ್ .ಕಾಂಗೆ ತಿಳಿಸಿದರು.
ವೈಟ್‌ಫೀಲ್ಡ್‌ನಲ್ಲಿ ಬಿ.ಡಿ.ಜತ್ತಿ ಅವರ ದ್ವಿತೀಯ ಪುತ್ರ ದಾನಪ್ಪ ಬಸಪ್ಪ ಜತ್ತಿ (74) ಅವರಿಗೆ ಸೇರಿದ 24 ವಿಲ್ಲಾಗಳಿವೆ. ಈ ಪೈಕಿ 14 ವಿಲ್ಲಾಗಳನ್ನು ಜತ್ತಿ ಅವರು ಇತರರಿಗೆ
ಮಾರಾಟ ಮಾಡಿದ್ದು, ಅಲ್ಲೇ ಬಿ.ಡಿ.ಜತ್ತಿ ಅವರ ಕುಟುಂಬ ವಾಸವಿದೆ. ಕಳೆದ ವರ್ಷ ಎಸ್‌ಟಿಪಿ ಶುಚಿಗೊಳಿಸುವ ಸಂದರ್ಭದಲ್ಲಿ ಕಾರ್ಮಿಕ ಪೃಥ್ವಿರಾಜ್ ಎಂಬುವರು ಮೃತ ಪಟ್ಟಿದ್ದರು. ಈ ಸಂಬಂಧ ವೈಟ್‌ಫೀಲ್ಡ್ ಠಾಣೆ ಯಲ್ಲಿ ವಿಲ್ಲಾ ಮಾಲಿಕರು ಹಾಗೂ ಗುತ್ತಿಗೆ ದಾರರ ವಿರುದ್ಧ ದೂರು ದಾಖಲಾಗಿತ್ತು.
ಬಳಿಕ ಎಫ್‌ಐಆರ್‌ನಲ್ಲಿ ನನ್ನ ಹೆಸರನ್ನು ಸೇರಿಸಿದ್ದರು. ಇನ್ನು ಈ ವಿಲ್ಲಾಕ್ಕೆ ಹೊಂದಿಕೊಂಡಂತೆ ಸ್ಥಳೀಯ ಸರ್ಕಾರಿ ಜಾಗ ಇದ್ದು,ಪಾಲಿಕೆ ಸದಸ್ಯರೊಬ್ಬರು ಖಾಸಗಿ ಉದ್ಯಮಿಯೊಬ್ಬರಿಗೆ ಸರ್ಕಾರಿ ಭೂಮಿ ಒತ್ತುವರಿ
ಮಾಡಿ ರಸ್ತೆ ಮಾಡಿಸಿಕೊಟ್ಟಿದ್ದರು. ಈ ಸಂಬಂಧ ನಾನು ಪಾಲಿಕೆಗೆ ದೂರು ನೀಡಿದ್ದೆ. ಈ ಕಾರಣಕ್ಕೆ ಪಾಲಿಕೆ ಸದಸ್ಯ ನನ್ನ ವಿರುದ್ಧ ಜಗಳ ಮಾಡಿದ್ದರು. ಜತೆಗೆ, ನಮ್ಮ ಕುಟುಂಬದ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿ ದ್ದರು. ಈ ಎರಡೂ ಪ್ರಕರಣ ಕೈ ಬಿಡಲು ವೈಟ್‌ಫೀಲ್ಡ್ ವಿಭಾಗದ ಎಸಿಪಿ ಹಣಕ್ಕಾಗಿಬೇಡಿಕೆ ಇಟ್ಟಿದ್ದರು. ಅದರಂತೆ ಐದು ಲಕ್ಷ ಹಣವನ್ನು ಎಸಿಪಿ ಅವರಿಗೆ ನೀಡಿದರೂ ಕಿರುಕುಳ ನೀಡುತ್ತಿದ್ದಾರೆ ಎಂದು ಲಕ್ಷ್ಮಿ ಅಳಲು ತೋಡಿಕೊಂಡರು.
ಪದೇ-ಪದೆ ಕರೆ ಮಾಡಿ ಕಿರುಕುಳ?: ಎಸಿಪಿಗೆ ಅವರಿಗೆ 5 ಲಕ್ಷ ಹಣ ನೀಡಿದರೂ ರಾತ್ರಿ 11 ಗಂಟೆ ಸುಮಾರಿಗೆಲ್ಲಾ ಕರೆ ಮಾಡಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು. ಕಳೆದ ಒಂದುವರ್ಷದಿಂದ ಇದೇ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಪತಿ ವಿರುದ್ಧವೂ ದೂರು ದಾಖಲು ವಿಲ್ಲಾದ ಮಾಲೀಕರೊಬ್ಬರು ಕೂಡ ಪತಿ ಡಿ.ಬಿ.ಜತ್ತಿ ಅವರು ಪಿಸ್ತೂಲ್ ತೋರಿಸಿ ಬೆದರಿಸಿದರು ಎಂದು ಆರೋಪಿಸಿ ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಕೈ ಬಿಡಲು ಸಬ್ ಇನ್ಸ್‌ಪೆಕ್ಟರ್‌ವೊಬ್ಬರು ಎರಡು ಲಕ್ಷ ಲಂಚ ಪಡೆದಿದ್ದಾರೆ. ಆ ಬಳಿಕವೂ ನಿತ್ಯ ವಿಚಾರಣೆ ವೇಳೆ ಠಾಣೆಗೆ ಕರೆಯುತ್ತಾರೆ. ವಿಚಾರಣೆ ನೆಪದಲ್ಲಿ ಈಗಲೂ ಹಣಕ್ಕೆ ಪೀಡಿಸುತ್ತಿದ್ದಾರೆ ಎಂದು
ಕಣ್ಣೀರಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.