
ವಿಜಯವಾಡ(ಜೂ.18): ತೆಲುಗು ಭಾಷೆಯ ಮಾಜಿ ಟಿವಿ ನಿರೂಪಕಿ ತೇಜಸ್ವಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದ ತೇಜಸ್ವಿನಿ, ಕೃಷ್ಣ ಜಿಲ್ಲೆಯ ಇಡುಪುಗಾಲ್ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೇಜಸ್ವಿನಿ ರೂಮ್‌ನಿಂದ ಹೊರಗೆ ಬಾರದ್ದನ್ನ ಗಮನಿಸಿದ ಕುಟುಂಬಸ್ಥರು ಬಾಗಿಲು ಒಡೆದು ಒಳಪ್ರವೇಶಿದಾಗ ಘಟನೆ ಬೆಳೆಕಿಗೆ ಬಂದಿದೆ. ತಕ್ಷಣವೇ ತೇಜಸ್ವಿಯನಿಯನ್ನ ಆಸ್ಪತ್ರೆಗೆ ದಾಖಲಿಸಲಾದರೂ ಪ್ರಯೋಜನವಾಗಲಿಲ್ಲ.
ತೇಜಸ್ವಿನಿ 5 ವರ್ಷಗಳ ಹಿಂದೆ ಪವನ್ ಎಂಬುವರರನ್ನ ಮದುವೆಯಾಗಿದ್ದರು. ಪವನ್ ಹಾಗೂ ತೇಜಸ್ವಿನಿ ಜಾತಿ ಬೇರೇಯಾಗಿದ್ದ ಕಾರಣ ಇವರ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮದುವೆ ಬಳಿಕ ಇವರಿಬ್ಬರು ಮಧ್ಯ ಜಗಳ ಕೂಡ ನಡೆದಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.