ಸುಷ್ಮಾ ಸ್ವರಾಜ್ ಬದುಕಿನ ಪುಟಗಳು..ಬಾಲ್ಯ, ಶಿಕ್ಷಣ, ರಾಜಕಾರಣ

Published : Aug 07, 2019, 12:32 AM ISTUpdated : Aug 09, 2019, 12:37 PM IST
ಸುಷ್ಮಾ ಸ್ವರಾಜ್ ಬದುಕಿನ ಪುಟಗಳು..ಬಾಲ್ಯ, ಶಿಕ್ಷಣ, ರಾಜಕಾರಣ

ಸಾರಾಂಶ

ಸುಷ್ಮಾ ಸ್ವರಾಜ್ ಕೇವಲ ಒಬ್ಬ ರಾಜಕೀಯ ನಾಯಕಿ ಅಲ್ಲ.. ಅವರೊಬ್ಬ ವಕೀಲೆ,, ಅವರೊಬ್ಬ ತಾಯಿ.. ಒಂದೇ ಟ್ವೀಟ್ ಗೆ ಸ್ಪಂದಿಸುವ ಗುಣವಿದ್ದ ಮಹಾಮಾತೆ.. ಕನ್ನಡವನ್ನು ಇಷ್ಟಪಟ್ಟು  ಕಲಿತ ಕನ್ನಡತಿ..ಇಂತ ಸ್ವರಾಜ್ ಅವರ ಬದುಕಿನ ಹೆಜ್ಜೆಗಳು ಪ್ರತಿಯೊಬ್ಬರಿಗೂ ಪ್ರೇರಣಾದಾಯಕ..

ಬೆಂಗಳೂರು[ಆ. 07]  ಒಬ್ಬ ರಾಜಕಾರಣಿಯಾಗಿ, ಒಬ್ಬ ಪ್ರಭಾವಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಮಾಡಿದ ಕೆಲಸಗಳು ನಮಗೆಲ್ಲ ಗೊತ್ತೇ ಇದೆ. ಒಬ್ಬಳು ತಾಯಿಯನ್ನು ಕಳೆದುಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಮರಣೆ ಮಾಡುತ್ತಾರೆ. ಅಂದರೆ ಅವರು ಹೊಂದಿದ್ದ ಶಕ್ತಿ ಎಂಥಹದು ಎಂಬುದನ್ನು ಅವರಿತುಕೊಳ್ಳಬಹುದು.

"

ಸುಷ್ಮಾ ಸ್ವರಾಜ್ ಬದುಕಿನ ಸಾಧನೆಯ ಶೀಖರ ಏರಿದ ಕತೆ ಸರಳವಾದದ್ದೇನಲ್ಲ. ಅವರ ಬದುಕಿನ ಒಂದೊಂದು ಪುಟಗಳನ್ನು ನೋಡಲೇಬೇಕು. 1952ರ ಫೆಬ್ರುವರಿ 14 ರಂದು ಹರಿಯಾಣದ ಅಂಬಾಲಾ ಕ್ಯಾಂಟ್​​ ನಲ್ಲಿ ಸುಷ್ಮಾ ಜನಿಸಿದರು. ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ, ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದ್ದರು.

ಎಂದಿಗೂ ಮರೆಯುವ ಹಾಗಿಲ್ಲ ಸುಷ್ಮಾ ಸ್ವರಾಜ್ ಕನ್ನಡ ಭಾಷಣ!

*1973ರಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ವಕೀಲರಾಗಿ ಅಭ್ಯಾಸ ಆರಂಭ
* 1970ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​​ನೊಂದಿಗೆ ಹೋರಾಟ
* ವಾಜಪೇಯಿ, ಎಲ್​.ಕೆ.ಅಡ್ವಾಣಿ,  ಜಾರ್ಜ್ ಫರ್ನಾಂಡಿಸ್​​ ಜೊತೆ ನಿಕಟ ಸಂಬಂಧ 
* 1975ರಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಕಾನೂನು ರಕ್ಷಣಾ ತಂಡದಲ್ಲಿ ಭಾಗಿ 
* ಜಯಪ್ರಕಾಶ್ ನಾರಾಯಣರ ಚಳುವಳಿಯಲ್ಲಿ ಸುಷ್ಮಾ ಸಕ್ರಿಯವಾಗಿ ಭಾಗಿ

ಕರ್ನಾಟಕದೊಂದಿಗೆ ಸುಷ್ಮಾ ನಂಟು..ಒಂದೊಂದು ಪುಟಗಳು ರೋಚಕ 

* ತುರ್ತು ಪರಿಸ್ಥಿತಿಯ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಸುಷ್ಮಾ 
* 1977ರಿಂದ 1982ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಆಯ್ಕೆ
* 25ನೇ ವಯಸ್ಸಿನಲ್ಲಿ ಅಂಬಾಲಾ ಕಂಟೋನ್ಮೆಂಟ್ ಶಾಸನ ಸಭೆಗೆ ಅವಕಾಶ
* 1977ರ ಜುಲೈನಲ್ಲಿ ಆಗಿನ ಸಿಎಂ ದೇವಿ ಲಾಲ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವೆ
* 1979ರಲ್ಲಿ ಹರಿಯಾಣ ರಾಜ್ಯದ ಜನತಾ ಪಕ್ಷದ ರಾಜ್ಯಾಧ್ಯಕ್ಷೆಯಾಗಿ ಕಾರ್ಯನಿರ್ವಹಣೆ 
* 1987ರಿಂದ 1990ರವರಗೆ ಹರಿಯಾಣ ಸರ್ಕಾರದಲ್ಲಿ  ಶಿಕ್ಷಣ ಸಚಿವೆ ಕಾರ್ಯ ನಿರ್ವಹಣೆ 
* 1998ರಲ್ಲಿ ದೆಹಲಿ ಸಿಎಂ ಆಗಿ ಸೇವೆ ಸಲ್ಲಿಸಿದ ಸುಷ್ಮಾ ಸ್ವರಾಜ್
* 1999ರಲ್ಲಿ ಬಳ್ಳಾರಿ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಸುಷ್ಮಾ
* 2014ರಲ್ಲಿ ಮೋದಿ ಸರ್ಕಾದಲ್ಲಿ ವಿದೇಶಾಂಗ ಸಚಿವೆಯಾಗಿ ಸೇವೆ
* 2019ರಲ್ಲಿ ಚುನಾವಣೆಯಿಂದ ನಿವೃತ್ತಿ ಘೋಷಿಸಿದ ಸುಷ್ಮಾ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ
ಸಿದ್ದರಾಮಯ್ಯ ಬಳಿಕ ಸತೀಶ್‌ ಜಾರಕಿಹೊಳಿ ಸಿಎಂ ಆದರೆ ಖುಷಿ: ಬಿ.ಕೆ.ಹರಿಪ್ರಸಾದ್‌