
ನೈಜೀರಿಯಾ(ಜ.31): ಮೂರ್ನಾಲ್ಕು ಮದುವೆಯಾದ, ಹತ್ತಾರು ಮಕ್ಕಳನ್ನು ಹೊಂದಿರುವ ಬಹುಪತ್ನಿ ವಲ್ಲಭರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ 130 ಮದುವೆಯಾಗಿದ್ದ. 200ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿದ್ದ. ಆತನ ಪತ್ನಿಯರಲ್ಲಿ ಕೆಲವರು ಗರ್ಭಿಣಿಯಾಗಿದ್ದಾರೆ ಎಂಬ ವರದಿಗಳಿವೆ. ಆ ವ್ಯಕ್ತಿ ಈಗ ಅಜ್ಞಾತ ಕಾಯಿಲೆಯಿಂದ ಮೃತನಾಗಿದ್ದಾರೆ!
ನೈಜೀರಿಯಾದ 93 ವರ್ಷದ ಮುಸ್ಲಿಂ ಮೌಲ್ವಿ ಮೊಹಮ್ಮದ್ ಬೆಲ್ಲೋ ಅಬುಬಾಕರ್ ಎನ್ನುವವರು ಇಷ್ಟೊಂದು ಮದುವೆಯಾಗಿ 203 ಮಕ್ಕಳನ್ನು ಹುಟ್ಟಿಸಿ ಇಹಲೋಕ ತ್ಯಜಿಸಿದ್ದಾರೆ. ಧರ್ಮಗ್ರಂಥದಲ್ಲಿ 4 ಮದುವೆಯಾಗುವುದಕ್ಕಷ್ಟೇ ಅವಕಾಶ ಇದ್ದರೂ, ಅದಾವುದಕ್ಕೂ ತಲೆಕೆಡಿಸಿಕೊಳ್ಳದ ಬೆಲ್ಲೋ ನಿರಂತರ ಮದುವೆಯಾಗುತ್ತಲೇ ಹೋಗಿದ್ದಾರೆ.
2008ರಲ್ಲಿ ಬೆಲ್ಲೋಗೆ 86 ಪತ್ನಿಯರಾದಾಗ ಇತರ ಮೌಲ್ವಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ 82 ಪತ್ನಿಯರಿಗೆ ಕೂಡಲೇ ವಿಚ್ಛೇದನ ನೀಡಬೇಕು ಎಂದು ಹೇಳಿದ್ದರು. ಆದರೆ, ಆದೇಶ ಪಾಲಿಸಲು ನಿರಾಕರಿಸಿದ ಬೆಲ್ಲೋ ಮದುವೆಯಾಗುವುದು ಧಾರ್ಮಿಕ ಕಾರ್ಯವೆಂದು ತನ್ನ ಕಾಯಕ ಮುಂದುವರಿಸಿದ್ದರು. ಹೆಚ್ಚು ಹೆಚ್ಚು ಮದುವೆಯಾಗುವ ಮೂಲಕ ಸೃಷ್ಟಿಕರ್ತನನ್ನು ಸೇರುವುದು ತನ್ನ ಉದ್ದೇಶವೆಂದು ತನ್ನ ಜೊತೆಗಾರರಿಗೆ ಬೆಲ್ಲೋ ಹೇಳಿದ್ದರೆಂದು ನ್ಯೂಸ್ ಏಜೆನ್ಸಿ ಆಫ್ ನೈಜೀರಿಯಾ ವರದಿ ಮಾಡಿದೆ.
ನಿಧನಹೊಂದುವ ವೇಳೆಗೆ ಒಟ್ಟು 130 ಪತ್ನಿಯನ್ನು ಅಗಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.