ವರ್ಷಕ್ಕೆ 88 ಲಕ್ಷ ರೂ. ಸಂಬಳ ಪಡೆಯುವವರಿಗೆ ಮಾತ್ರ ಹೆಚ್1ಬಿ ವೀಸಾ

Published : Jan 31, 2017, 01:49 PM ISTUpdated : Apr 11, 2018, 01:02 PM IST
ವರ್ಷಕ್ಕೆ 88 ಲಕ್ಷ ರೂ. ಸಂಬಳ ಪಡೆಯುವವರಿಗೆ ಮಾತ್ರ ಹೆಚ್1ಬಿ ವೀಸಾ

ಸಾರಾಂಶ

ಇನ್ನೂ ವಿದೇಶಿ ಉದ್ಯೋಗಿಗಳ ಮೇಲೆ ವಕ್ರದೃಷ್ಟಿ ಬೀರಿರುವ ಟ್ರಂಪ್, ಹೊಸ ಬಿಲ್ ಮಂಡಿಸುವ ಮೂಲಕ ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ ನೀಡಿದ್ದಾರೆ. ಮೂಲ ಅಮೆರಿಕನ್ನರಿಗೆ  ಉದ್ಯೋಗ ದೊರಕಿಸಿಕೊಡುವ ಸಿದ್ಧತೆ ನಡೆಸಿರುವ ಟ್ರಂಪ್, ಭಾರತ ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಎಚ್ 1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿಗೊಳಿಸಿದೆ.

ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ನಿಯಮ ಜಾರಿ ಮಾಡಿದ್ದಾರೆ. ಅಮೆರಿಕ ಸಂಸತ್​ನಲ್ಲಿ H​1B ವೀಸಾ ತಿದ್ದುಪಡಿ ಬಿಲ್​ ಮಂಡನೆಯಾಗಿದೆ. ಅಮೆರಿಕದ ವೀಸಾ ಪಡೆಯಲು ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಅಮೆರಿಕ ವೀಸಾ ಪಡೆಯಲು 1 ಲಕ್ಷ30 ಸಾವಿರ ಡಾಲರ್​ ನಿಗದಿ ಪಡಿಸಲಾಗಿದೆ. 1 ಲಕ್ಷ30 ಸಾವಿರ ಡಾಲರ್​ ವೇತನ ಇರುವವರಿಗೆ ಮಾತ್ರ ವೀಸಾ ಸಿಗಲಿದ್ದು, ವರ್ಷಕ್ಕೆ 88 ಲಕ್ಷ ವೇತನ ಇದ್ದವರಿಗಷ್ಟೇ ಅಮೆರಿಕ ವೀಸಾ ಕೈ ಸೇರಲಿದೆ. ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಈ ಹೊಸ ಮಸೂದೆ ಮಂಡನೆಯಾಗಿದೆ. ಅಮೆರಿಕದಲ್ಲಿ ಕೆಲಸಕ್ಕೆ ತೆರಳುವವರಿಗೆ ಮತ್ತಷ್ಟು ಕಠಿಣ ನಿಯಮಗಳು ಎದುರಾಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಭಾರತದ IT ಕಂಪನಿಗಳ ಮೇಲೆ ಈ ಬಿಲ್ ಬಾರೀ ಪರಿಣಾಮ ಬೀರಲಿದೆ. ಇನ್ಮುಂದೆ ಕಡಿಮೆ ವೇತನ ಪಡೆಯುವವರಿಗೆ ಅಮೆರಿಕ ವೀಸಾ ಇಲ್ಲದಂತಾಗಿದೆ.

ಇನ್ನೂ ವಿದೇಶಿ ಉದ್ಯೋಗಿಗಳ ಮೇಲೆ ವಕ್ರದೃಷ್ಟಿ ಬೀರಿರುವ ಟ್ರಂಪ್, ಹೊಸ ಬಿಲ್ ಮಂಡಿಸುವ ಮೂಲಕ ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಹೊಡೆತ ನೀಡಿದ್ದಾರೆ. ಮೂಲ ಅಮೆರಿಕನ್ನರಿಗೆ  ಉದ್ಯೋಗ ದೊರಕಿಸಿಕೊಡುವ ಸಿದ್ಧತೆ ನಡೆಸಿರುವ ಟ್ರಂಪ್, ಭಾರತ ಸೇರಿದಂತೆ ವಿದೇಶಿ ಉದ್ಯೋಗಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ. ಇದರಿಂದಾಗಿ ಅಮೆರಿಕ ಎಚ್ 1 ಬಿ ವೀಸಾ ಪಡೆಯಲು ಕಠಿಣ ನಿಯಮ ಜಾರಿಗೊಳಿಸಿದೆ. ಅಮೆರಿಕದ ಎಚ್ 1 ಬಿ ವೀಸಾದ ಹೊಸ ನೀತಿಯಿಂದಾಗಿ ಭಾರತೀಯ ಐಟಿ ದಿಗ್ಗಜ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋಗೆ ಭಾರೀ ಹೊಡೆತ ಬೀಳಲಿದೆ.

ಇಂದು ಅಮೆರಿಕ ಸಂಸತ್ ನಲ್ಲಿ ಕ್ಯಾಲಿಫೋರ್ನಿಯಾದ ಸದಸ್ಯ ಝೋಯೆ ಲೋಫ್ ಗ್ರೆನ್,  2017ನೇ ಸಾಲಿನ ‘ಹೈ ಸ್ಕಿಲ್ಡ್ ಇಂಟಗ್ರಿಟಿ ಅಂಡ್ ಫೇರ್ ನೆಸ್’ ಕಾಯ್ದೆಯನ್ನು ಮಂಡಿಸಿದರು. ಈ ಹೊಸ ಮಸೂದೆ ಪ್ರಕಾರ, ಯಾವುದೇ ಕಂಪನಿ ಇರಲಿ ಅವರು ಮಸೂದೆಯಲ್ಲಿ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಸಂಬಳ ಹೊಂದಿರುವವರನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ 1, 30, 000 ಲಕ್ಷ ಅಮೆರಿಕನ್ ಡಾಲರ್ ಪಡೆಯುವವರಿಗೆ ಮಾತ್ರ ಎಚ್1 ಬಿ ವೀಸಾ ನೀಡಬೇಕಾಗುತ್ತದೆ. ಇದರಿಂದ ಬೆಂಗಳೂರು ಸೇರಿದಂತೆ ಭಾರತದ ಹಲವಾರು ಅಂತರಾಷ್ಟ್ರೀಯ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!