'ಬಿಜೆಪಿಯಲ್ಲಿ ಕೋಟಿ ಕೊಟ್ರೆ ಮಂತ್ರಿ ಸ್ಥಾನ, ನೂರು ಕೋಟಿ ಕೊಟ್ಟರೆ ಡಿಸಿಎಂ’

Published : Sep 15, 2019, 09:13 AM IST
'ಬಿಜೆಪಿಯಲ್ಲಿ ಕೋಟಿ ಕೊಟ್ರೆ ಮಂತ್ರಿ ಸ್ಥಾನ, ನೂರು ಕೋಟಿ ಕೊಟ್ಟರೆ ಡಿಸಿಎಂ’

ಸಾರಾಂಶ

ಬಿಜೆಪಿಯಲ್ಲಿ ಕೋಟಿ ಕೊಟ್ರೆ ಮಂತ್ರಿ ಸ್ಥಾನ| ನೂರು ಕೋಟಿ ಕೊಟ್ಟರೆ ಡಿಸಿಎಂ ಸಹ ಆಗಬಹುದು| ಮಾಜಿ ಸಂಸದನ ಗಂಭೀರ ಆರೋಪ

ಬಳ್ಳಾರಿ[ಸೆ.15]: ಕೋಟಿ ಕೊಟ್ಟರೆ ಬಿಜೆಪಿಯಲ್ಲಿ ಮಂತ್ರಿಯಾಗಬಹುದು. ನೂರು ಕೋಟಿ ಕೊಟ್ಟರೆ ಡಿಸಿಎಂ ಸಹ ಆಗಬಹುದು ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣ ಸಂಪೂರ್ಣ ಹಳಿ ತಪ್ಪಿದೆ. ಹಣವಿದ್ದವರಿಗೆ ಮಾತ್ರ ಮನ್ನಣೆ ಎಂಬ ಸ್ಥಿತಿ ಬಂದಿದೆ. ಬಿಜೆಪಿಯಲ್ಲಿ ಮಂತ್ರಿ ಸ್ಥಾನ, ಡಿಸಿಎಂ ಸ್ಥಾನಗಳು ಮಾರಾಟಕ್ಕಿವೆ. ಇದನ್ನು ನನ್ನೊಬ್ಬನ ಆರೋಪವಲ್ಲ. ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ಉಗ್ರಪ್ಪ ಹೇಳಿದರು.

ರಾಜ್ಯ ಮತ್ತು ರಾಷ್ಟ್ರದಲ್ಲಿ ಸೇಡಿನ ರಾಜಕೀಯ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ವಿರುದ್ಧ ಸೇಡಿನ ರಾಜಕಾರಣಕ್ಕಾಗಿ ಇಡಿ ತನಿಖೆ ನಡೆದಿದೆ. ಡಿ.ಕೆ.ಶಿವಕುಮಾರ್‌ ಅವರ ಸಂಪತ್ತು ಮೊದಲು .8 ಕೋಟಿ ಎಂದರು. ಇದೀಗ .800 ಕೋಟಿ ಎನ್ನುತ್ತಿದ್ದಾರೆ. ಬಿಜೆಪಿಯ ಅಮಿತ್‌ ಶಾ ಹಾಗೂ ನಿತಿನ್‌ ಗಡ್ಕರಿ ಅವರ ಮಕ್ಕಳ ಆಸ್ತಿ ಎಷ್ಟುಪಟ್ಟು ಹೆಚ್ಚಾಗಿದೆ ಎಂಬುದು ಇಡಿ ಅವರಿಗೆ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ