ಲೋಕಸಭಾ ಎಲೆಕ್ಷನ್ ಮುನ್ನವೇ ಬಿಜೆಪಿಗೆ ಬಿಗ್ ಶಾಕ್: ಮಾಜಿ ಸಿಎಂ ಕಾಂಗ್ರೆಸ್‌ಗೆ

By Web DeskFirst Published Nov 1, 2018, 7:56 PM IST
Highlights

ಮಾಜಿ ಮುಖ್ಯಮಂತ್ರಿ ಒಬ್ಬರು ಕಾಂಗ್ರೆಸ್ ಸೇರಿದ್ದು,  2019ರ ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿಗೆ ಬಿಗ್ ಶಾಕ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ.

ರಾಂಚಿ, [ನ.01]: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಖೋಡಾ ಅವರು ಇಂದು [ಗುರುವಾರ] ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು.

ಮಧು ಖೋಡಾ ಅವರು 2006ರಲ್ಲಿ ಮೊದಲಿಗೆ ಬಿಜೆಪಿಯಿಂದ ಸಚಿವರಾಗಿದ್ದರು. ಆ ನಂತರ ವಿವಿಧ ಪಕ್ಷಗಳನ್ನು ಒಗ್ಗೂಡಿಸಿಕೊಂಡು, ಕಾಂಗ್ರೆಸ್‌ನ ಬಾಹ್ಯ ಬೆಂಬಲದೊಂದಿದೆ ಮುಖ್ಯಮಂತ್ರಿ ಆಗಿದ್ದರು.

ಎರಡು ವರ್ಷ ಆಡಳಿತ ಮಾಡಿದ್ದ ಮಧು ಖೋಡಾ 2008 ರಲ್ಲಿ ರಾಜೀನಾಮೆ ನೀಡ ಬೇಕಾಯಿತು. ಆ ನಂತರ ಮಧೂ ಖೋಡಾ 2009ರಲ್ಲಿ ಪಕ್ಷೇತರರಾಗಿ ಲೋಕಸಭೆಗೆ ಚುನಾಯಿತರಾದರು ಆದರೆ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದರು.

ಇತ್ತೀಚೆಗಷ್ಟೆ ಮಧು ಖೋಡಾ ಅವರ ಪತ್ನಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಇದೀಗ ಮಧು ಖೋಡಾ ಇಂದು ಕಾಂಗ್ರೆಸ್ ಸೇರಿ ಮುಂಬರುವ ಲೋಕಸಭೆ ಚುನಾವಣೆಗೆ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಗೆ ಆನೆ ಬಲ ಬಂದಂತಾಗಿದೆ.

click me!