ರಾತ್ರಿ ಪೊಲೀಸ್ ಮುಂದೆ ಮಾಡೆಲ್ ಬಟ್ಟೆ ಬಿಚ್ಚಿದ್ಯಾಕೆ? ಬೆಳಗ್ಗೆ ಹೇಳಿದ್ದೇನು?

Published : Nov 01, 2018, 07:25 PM IST
ರಾತ್ರಿ ಪೊಲೀಸ್ ಮುಂದೆ ಮಾಡೆಲ್ ಬಟ್ಟೆ ಬಿಚ್ಚಿದ್ಯಾಕೆ? ಬೆಳಗ್ಗೆ ಹೇಳಿದ್ದೇನು?

ಸಾರಾಂಶ

ರಾತ್ರಿ ವೇಳೆ ಮಾಡೆಲ್ ಒಬ್ಬಳು ಪೊಲೀಸ್ ಮುಂದೆ ಬಟ್ಟೆ ಬಿಚ್ಚಿದ್ದಾಳೆ. ಬಳಿಕ ಬೆಳಗ್ಗೆ ಈ ಬಗ್ಗೆ ಆಕೆ ಹೇಳಿದ್ದೇನು ಗೊತ್ತಾ। ಪೊಲೀಸ್ ಮುಂದೆ ಬಟ್ಟೆ ಬಿಚ್ಚಿದ್ದು ಏಕೆ ಎಂಬುದನ್ನು ಆಕೆ ವಿವರಿಸಿದ್ದಾಳೆ.

ಮುಂಬೈ, [ನ.01]: ಮದ್ಯದ ಅಮಲಿನಲ್ಲಿ ಏನೇನು ಮಾಡ್ತಾರೋ ಅಂತ ಕುಡುಕರಿಗೆ ಗೊತ್ತಿರಲ್ಲ. ಒಬ್ಬಬ್ರು ಗೊತ್ತಿದ್ರೂ ಬೇಕು ಅಂತಾಲೇ ನಾಟಕವಾಡುತ್ತಾರೆ.

 ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಮದ್ಯದ ನಶೆಯಲ್ಲಿದ್ದ ಮಾಡೆಲ್ ಒಬ್ಬಳು ಪೊಲೀಸ್ ಮುಂದೆ ಬಟ್ಟೆ ಬಿಚ್ಚಿದ್ದಳು. 

ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಘಟನೆ ಬಳಿಕ ಮಾಡೆಲ್, ಪೊಲೀಸ್ ಮುಂದೆ ಬಟ್ಟೆ ಬಿಚ್ಚಿದ್ದು ಏಕೆ ಎಂಬುದನ್ನು ವಿವರಿಸಿದ್ದಾಳೆ.

ಕುಡಿದು ನಶೆಯಲ್ಲಿದ್ದ 27 ವರ್ಷದ ಮೇಘಾ ಶರ್ಮಾ ಎಂಬ ಮಾಡೆಲ್ ಭದ್ರತಾ ಸಿಬ್ಬಂದಿಗೆ ಸಿಗರೇಟ್ ತರುವಂತೆ ಕೇಳಿದ್ದಳು. ಅದಕ್ಕೆ ಗಾರ್ಡ್ ಒಪ್ಪಿರಲಿಲ್ಲ. ಕೋಪಗೊಂಡ ಮಾಡೆಲ್ ಆತನಿಗೆ ನಿಂದಿಸಿ, ಹೊಡೆದಿದ್ದಳು. 

ಈ ಬಗ್ಗೆ ಗಾರ್ಡ್ 100 ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಪೊಲೀಸ್ ಬರ್ತಿದ್ದಂತೆ ಬಟ್ಟೆ ಬಿಚ್ಚಿದ್ದ ಮೇಘಾ ಶರ್ಮಾ, ಪೊಲೀಸ್ ಠಾಣೆಗೆ ಹೋಗಲು ನಿರಾಕರಿಸಿದ್ದಾಳೆ.

 ಬಟ್ಟೆ ಬಿಚ್ಚಿದ್ಯಾಕೆ? 
ಮುಂಬೈನ ಅಪಾರ್ಟ್ಮೆಂಟ್ ನಲ್ಲಿ ನಾನೊಬ್ಬಳೆ ವಾಸವಾಗಿದ್ದೇನೆ. ಈಗ ಕಾಲ ಸರಿಯಿಲ್ಲ. ಪೊಲೀಸರೂ ಅತ್ಯಾಚಾರವೆಸಗುತ್ತಿರುವ ಘಟನೆ ನಡೆಯುತ್ತಿದೆ. ರಾತ್ರಿ 1 ಗಂಟೆ ವೇಳೆಗೆ ಮಹಿಳಾ ಕಾನ್ಸ್ ಟೇಬಲ್ ಇಲ್ಲದೆ 3 ಪೊಲೀಸರು ನನ್ನ ಬಂಧನಕ್ಕೆ ಮುಂದಾಗಿದ್ದಾರೆ. 

ಅವರನ್ನು ಹೇಗೆ ನಂಬುವುದು. ಮಹಿಳಾ ಕಾನ್ಸ್ ಟೇಬಲ್ ಇಲ್ಲದೆ ಬಂಧನಕ್ಕೆ ಬಂದ ಪೊಲೀಸ್ ನೋಡಿ ನಾನು ಭಯಗೊಂಡಿದ್ದೆ. ಹಾಗಾಗಿ ಬಟ್ಟೆ ಬಿಚ್ಚಿ ನಾಟಕವಾಡಿದೆ ಎಂದು ಸ್ಪಷ್ಟನೆ ನೀಡಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು