
ಅಹಮದಾಬಾದ್[ಜು.12]: ಗಿರ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಬಯಲು ಮಾಡಿದ ಆರ್‌ಟಿಐ ಕಾರ್ಯಕರ್ತ ಅಮಿತ್ ಜಿತ್ವಾ ಅವರನ್ನು 2010ರಲ್ಲಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಲಂಕಿ ಹಾಗೂ ಇತರ 6 ಮಂದಿಗೆ ಸಿಬಿಐನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಸಿಬಿಐನ ವಿಶೇಷ ಕೋರ್ಟ್‌ನ ನ್ಯಾಯಾದೀಶ ಕೆ.ಎಂ ದಾವೆ ಅವರು, ಮುಖ್ಯ ದೋಷಿಗಳಾದ ಸೋಲಂಕಿ ಹಾಗೂ ಆತನ ಅಳಿಯ ಶಿವ ಸೋಲಂಕಿಗೆ 15 ಲಕ್ಷ ರು. ದಂಡ ವಿಧಿಸಿದ್ದಾರೆ.
ಗಿರ್ ರಕ್ಷಿತಾರಣ್ಯದಲ್ಲಿ ಸೋಲಂಕಿ ಅವರು ಭಾಗಿಯಾಗಿದ್ದ ಅಕ್ರಮ ಗಣಿಗಾರಿಕೆಯನ್ನು 2010ರಲ್ಲಿ ವಕೀಲರಾಗಿದ್ದ ಅಮಿತ್ ಜಿತ್ವಾ ಅವರು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಮೂಲಕ ಬಯಲಿಗೆಳೆದಿದ್ದರು. ಇದರಿಂದ ಆಗ(2009-14ರವರೆಗೂ ಜುನಾಗಢ ಕ್ಷೇತ್ರ) ಸಂಸದರಾಗಿದ್ದ ಸೋಲಂಕಿ ಹಾಗೂ ಆತನ ಅಳಿಯ ಶಿವ ಸೋಲಂಕಿ ಕ್ರೋಧಗೊಂಡಿದ್ದರು.
ಕೊಲೆ ಕೇಸಲ್ಲಿ ಬಿಜೆಪಿ ಮಾಜಿ ಸಂಸದ ದೋಷಿ
ಈ ಪ್ರಕರಣ ಕುರಿತು ವಿಚಾರಣೆ ನಡೆಯಬೇಕಿದ್ದ ದಿನವೇ ಗುಜರಾತ್ ಹೈಕೋರ್ಟ್ ಆವರಣದಲ್ಲಿ 2010ರ ಜು.20ರಂದು ಅಮಿತ್ ಜಿತ್ವಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಮೊದಲಿಗೆ ವಿಚಾರಣೆ ನಡೆಸಿದ್ದ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು, ದಿನು ಸೋಲಂಕಿಗೆ ಕ್ಲೀನ್ ಚಿಟ್ ನೀಡಿದ್ದರು. ಆದರೆ, ಈ ಪ್ರಕರಣದ ತನಿಖೆ ಕುರಿತು ಅಸಂತೃಪ್ತಿ ವ್ಯಕ್ತಪಡಿಸಿದ್ದ ಹೈಕೋರ್ಟ್, ಪ್ರಕರಣದ ತನಿಖೆಯನ್ನು 2013ರಲ್ಲಿ ಸಿಬಿಐಗೆ ವಹಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.