
ಗದಗ (ನ. 11): ಸಿದ್ದರಾಮಯ್ಯ ಒಬ್ಬ ಸ್ವಯಂ ಘೋಷಿತ ಅಹಿಂದ ನಾಯಕ ಎನ್ನುವ ಹೇಳಿಕೆಗೆ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈಶ್ವರಪ್ಪ ಒಬ್ಬ ಪೆದ್ದ, ಅವನ ತಲೆಯಲ್ಲಿ ಮೆದುಳಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಉಪ ಚುನಾವಣೆಯಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಎಲ್ಲಾ ಕಡೆಗಳಲ್ಲಿಯೂ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ಯಡಿಯೂರಪ್ಪನವರೇ ಹೇಳಿದ್ದಾರೆ. ಅವರು ಬಿಜೆಪಿಯಲ್ಲಿ ಇಲ್ಲ ಅಂತ. ಆ ಬಗ್ಗೆ ನಾನೇನು ಹೇಳುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಂತ್ರಿಮಂಡಲ ವಿಸ್ತರಣೆ ಹೈ ಕಮಾಂಡ್ ಗೆ ಬಿಟ್ಟ ವಿಚಾರ. ಈ ಬಗ್ಗೆ ನಾನೂ ಕೂಡಾ ಹೈ ಕಮಾಂಡ್ ಜತೆ ಮಾತಾಡುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಧರ್ಮ ಒಡೆದ ಅಂತ ಆರೋಪ ಮಾಡಿದರು. ಹಾಗಾದ್ರೆ ಬಸವಣ್ಣ ಧರ್ಮ ಒಡೆದ್ರಾ? ಅಕ್ಕಮಹಾದೇವಿ ಹಾಗೂ ಬಸವಣ್ಣ ಜಯಂತಿ ಆಚರಣೆಗೆ ಚಾಲನೆ ನೀಡಿದ್ದಕ್ಕೆ ವೀರಶೈವರೂ ಕರೆದು ಸನ್ಮಾನ ಮಾಡಿದರು. ನೀವೆಲ್ಲಾ ಒಟ್ಟಾಗಿ ಬನ್ನಿ ಅಂದೆ. ಐದು ಪಿಟಿಷನ್ ಕೊಟ್ರು. ಅದನ್ನು ಅಲ್ಪಸಂಖ್ಯಾತ ಕಮಿಟಿಗೆ ಕೊಟ್ಟೆ. ಅಲ್ಲಿ ಅವಿರೋಧವಾಗಿ ನಿರ್ಧಾರವಾಯ್ತು.
ಲಿಂಗಾಯತ ಎನ್ನುವುದರ ಜೊತೆ ವೀರಶೈವ ಅಂತ ಸೇರಿಸಿ ಅಂದ್ರು. ಅದಕ್ಕೆ ನಾವು ಲಿಂಗಾಯತ ಧರ್ಮ ಮತ್ತು ಬಸವತತ್ವ ಪಾಲಿಸುವ ವೀರಶೈವರು ಅಂತ ಸೇರಿಸಿದೆವು. ಎಲ್ಲಾ ಸ್ವಾಮಿಗಳು ಸ್ವಾಗತ ಮಾಡಿದ್ರು. ಇಷ್ಟೆಲ್ಲಾ ಮಾಡಿದ ಮೇಲೂ ನನ್ನನ್ನು ಕಾರಣ ಮಾಡಿದ್ರೆ ಏನು ಮಾಡಲಿ? ಅದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.