ನಾನೂ ರಾಜೀನಾಮೆ ಕೊಟ್ಟುಬಿಡ್ತೇನೆ ಎಂದ ಸಿದ್ದರಾಮಯ್ಯ

Published : Jul 23, 2019, 12:13 PM ISTUpdated : Jul 23, 2019, 12:18 PM IST
ನಾನೂ ರಾಜೀನಾಮೆ ಕೊಟ್ಟುಬಿಡ್ತೇನೆ ಎಂದ ಸಿದ್ದರಾಮಯ್ಯ

ಸಾರಾಂಶ

ಅತೃಪ್ತ ನಾಯಕರು ರಾಜೀನಾಮೆ ನೀಡಿ ಮುಂಬೈ ತೆರಳಿದರೆ ಇತ್ತ ಸಿದ್ದರಾಮಯ್ಯ ಕೂಡ ರಾಜೀನಾಮೆ ಬಾಂಬ್ ಹಾಕಿದ್ದಾರೆ. 

ಬೆಂಗಳೂರು [ಜು.23] : ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪ್ರಹಸನಕ್ಕೆ ಕೊನೆ ಇಲ್ಲದಂತಾಗಿದೆ. ಈಗಾಗಲೇ ಮೂರು ಬಾರಿ ವಿಶ್ವಾಸಮತಕ್ಕೆ ನೀಡಿದ್ದ ಡೆಡ್ ಲೈನ್ ಮುಗಿದಿದೆ. ಅತ್ತ ಅತೃಪ್ತರು ರಾಜೀನಾಮೆ ನೀಡಿ ಮುಂಬೈನಲ್ಲೇ ಉಳಿದಿದ್ದರೆ, ಇತ್ತ ಸಿದ್ದರಾಮಯ್ಯ ಕೂಡ ರಾಜೀನಾಮೆ ಬಾಂಬ್ ಸಿಡಿಸಿದ್ದಾರೆ.

ಸಾಮಾನ್ಯ ಜನರಿಗೂ ರೇಜಿಗೆ ಹುಟ್ಟಿಸುವ ರಾಜಕೀಯ ನಾಟಕ ಸ್ವತಃ ರಾಜಕೀಯ ನಾಯಕರನ್ನು ಕಂಗೆಡಿಸಿದಂತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡುವ ಮಾತಾಡಿದ್ದಾರೆ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬದಾಮಿ ಕ್ಷೇತ್ರದ ಶಾಸಕ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಳಿ "ಏಯ್ ನೋಡಪ್ಪ.. ನಾನು ರಾಜೀನಾಮೆ ಕೊಟ್ಟುಬಿಡ್ತೇನೆ.." ಎಂದು ಹೇಳಿದ್ದಾರೆ.

ವಿಶ್ವಾಸಮತದ ಹೆಸರಿನಲ್ಲಿ ಕಲಾಪ ಎಳೆದಾಡುತ್ತಿದ್ದು, ಚರ್ಚೆ ವೇಳೆ ನೀವು ಮಾತನಾಡಿ ಸರ್ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಕ್ಕೆ ಈ ರೀತಿ ರಾಜೀನಾಮೆ ವಿಚಾರವೆತ್ತಿ ಪ್ರತಿಕ್ರಿಯಿಸಿದ್ದಾರೆ. 

ಇದರಿಂದ ಸಿದ್ದರಾಮಯ್ಯ ಕೂಡ ಹೈ ಡ್ರಾಮಾಗೆ ಕಂಗೆಟ್ಟರಾ ಎನ್ನುವ ಶಂಕೆ ಮೂಡಿದೆ. ಅತ್ತ ಬಿಜೆಪಿ ನಾಯಕರಿಗೂ ಗುಡ್ ಲಕ್ ಎಂದಿದ್ದು, ಸರ್ಕಾರ ಪತನವಾಗುವುದು ಖಚಿತವೇ ಎನ್ನುವ ಅನುಮಾನವನ್ನೂ ಹುಟ್ಟುಹಾಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BBK 12 ಟ್ರೋಫಿಯನ್ನು ಗಿಲ್ಲಿ ನಟನೇ ಗೆಲ್ಲಬೇಕು, ಇದಕ್ಕೂ ಕಾರಣ ಇದೆ: ಕಿರಿಕ್‌ ಕೀರ್ತಿ Open Post
ಶಾಲೆಗೆ ಹೋಗೋ ಬಾಲಕ ಅಂದ್ರೆ, ಗೆಳೆಯನೆದುರೇ ಬಾವಿಗೆ ಹಾರಿ ಜೀವಬಿಟ್ಟ 14ರ ಪೋರ ಜಗದೀಶ!