ವಿಧಾನಸಭೆ ಚುನಾವಣೆ ಮುಗಿದು ಅರ್ಧ ವರ್ಷ ಉರುಳಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಧಿಕಾರವನ್ನು ರಾಜ್ಯದಲ್ಲಿ ನಡೆಸುತ್ತಿದೆ. ಈ ನಡುವೆ ಸಿದ್ದರಾಮಯ್ಯ ತಮ್ಮ ಸೋಲಿನ ಪರಾಮರ್ಶೆಯನ್ನು ಬಹಳ ದೀರ್ಘ ಕಾಲದ ನಂತರ ಮಾಡಿದ್ದಾರೆ.
ದಾವಣಗೆರೆ[ಡಿ.04] ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 5 ವರ್ಷಗಳ ಕಾಲ ಅಧಿಕಾರ ನಡೆಸಿತ್ತು. ಮೊದಲಿನಿಂದಲೂ ಸಿದ್ದರಾಮಯ್ಯ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅದ್ಯಾವ ಮೂಲದ ಮಾಹಿತಿಯಿಂದಲೋ ಏನೋ ಅಂತಿಮವಾಗಿ ಬಾದಾಮಿಯಿಂದ ಸ್ಪರ್ಧೆ ಮಾಡಿದರು.
ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ಸೋಲು ಕಾಣಬೇಕಾಯಿತು. ಈಗ ಸಿದ್ದರಾಮಯ್ಯ ತಮ್ಮ ಸೋಲಿನ ಪರಾಮರ್ಶೆ ಮಾಡಿದ್ದಾರೆ. ಚಾಮುಂಡಿ ಸೋಲು ಈಗಲೂ ದಿಗ್ಭ್ರಮೆ ಮೂಡಿಸುತ್ತದೆ. ಅಷ್ಟೊಂದು ಕೆಲಸ ಮಾಡಿದರೂ ಜನ ಯಾವುದಕ್ಕೆ ಓಟು ಕೊಡ್ತಾರೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷ ಅಂದ್ರೆ ಅಮ್ಮವರ ಗಂಡನಾ?: ಸಿದ್ದುಗೆ ಟಾಂಗ್
ಹರಪನಹಳ್ಳಿಯಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ. ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿಕೊಂಡಿದ್ದಾರೆ.