ಬಾರದ ಲೋಕಕ್ಕೆ ಯುಟ್ಯೂಬ್ ಅಜ್ಜಿ ಮಸ್ತಾನಮ್ಮ!

Published : Dec 04, 2018, 06:32 PM ISTUpdated : Dec 04, 2018, 06:43 PM IST
ಬಾರದ ಲೋಕಕ್ಕೆ ಯುಟ್ಯೂಬ್ ಅಜ್ಜಿ ಮಸ್ತಾನಮ್ಮ!

ಸಾರಾಂಶ

ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬ್ ಜನಪ್ರಿಯ ವೃದ್ಧೆ ಮಸ್ತಾನಮ್ಮ ವಿಧಿವಶರಾಗಿದ್ದಾರೆ. ತಮ್ಮ ಗ್ರಾಮೀಣ ಸೊಗಡಿನ ಚಿಕನ್ ಆಹಾರ ಶೈಲಿಯಿಂದಲೇ ಮಸ್ತಾನಮ್ಮ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು.

ಗುಂಟೂರು(ಡಿ.04): ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬ್ ಜನಪ್ರಿಯ ವೃದ್ಧೆ ಮಸ್ತಾನಮ್ಮ ವಿಧಿವಶರಾಗಿದ್ದಾರೆ. ತಮ್ಮ ಗ್ರಾಮೀಣ ಸೊಗಡಿನ ಚಿಕನ್ ಆಹಾರ ಶೈಲಿಯಿಂದಲೇ ಮಸ್ತಾನಮ್ಮ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು.

107 ವರ್ಷದ ಮಸ್ತಾನಮ್ಮ ತಮ್ಮ ಚಿಕನ್ ಕರ್ರಿ ಮುಂತಾದ ಮಾಂಸಾಹಾರಿ ಆಹಾರಗಳಿಂದ ಕೇವಲ 2 ವರ್ಷಗಳಲ್ಲಿ ವಿಶ್ವದಾದ್ಯಂತ ಸುಮಾರು 12 ಲಕ್ಷ ಅಭಿಮಾನಿಗಳನ್ನು ಗಳಿಸಿದ್ದರು. ಅಲ್ಲದೇ ವಿಶ್ವದ ಅತ್ಯಂತ ಹಿರಿಯ  ಯುಟ್ಯೂಬರ್ ಎಂಬ ಖ್ಯಾತಿಗೂ ಮಸ್ತಾನಮ್ಮ ಪಾತ್ರರಾಗಿದ್ದರು.

ತಮ್ಮ 11ನೇ ವಯಸ್ಸಿನಲ್ಲೇ ಮದುವೆಯಾಗಿ ತಮ್ಮ 21ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿದ್ದ ಮಸ್ತಾನಮ್ಮ, ಬಹಳ ಕಷ್ಟಪಟ್ಟು 5 ಮಕ್ಕಳನ್ನು ಸಾಕಿದ್ದರು. ಆದರೆ ಕಾಲರಾ ರೋಗಕ್ಕೆ ತುತ್ತಾಗಿ ಮಸ್ತಾನಮ್ಮ ಅವರ ಐವರು ಮಕ್ಕಳ ಪೈಕಿ ನಾಲ್ವರು ಅಸುನೀಗಿದ್ದರು.

ಮಸ್ತಾನಮ್ಮ ಬಹಳ ರುಚಿಕರ ಅಡುಗೆ ಮಾಡುತ್ತಿದ್ದು, ದೇಶೀಯ ಶೈಲಿಯ ಅವರ ಅಡುಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಮೊಮ್ಮಗ ಲಕ್ಷ್ಮಣ್ ಹಾಗೂ ಅವರ ಗೆಳೆಯ ಶ್ರೀನಾಥ್ ರೆಡ್ಡಿ ಸೇರಿ ಮಸ್ತಾನಮ್ಮ ಡುಗೆ ಮಾಡುವ ವಿಧಾನವನ್ನು ಯಟ್ಯೂಬ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು.

ನಂತರ ಇದು ಜನಪ್ರಿಯತೆ ಪಡೆಯುತ್ತಿದ್ದಂತೇ ಲಕ್ಷ್ಮಣ್ ಮಸ್ತಾನಮ್ಮ ಹೆಸರಲ್ಲೇ ಯುಟ್ಯೂಬ್ ಖಾತೆ ತೆರೆದು ಅದರಲ್ಲಿ ಮಸ್ತಾನಮ್ಮ ಅವರ ಚಿಕನ್ ಖಾದ್ಯಗಳ ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು.

ಹೀಗೆ ತಮ್ಮ ಅಡುಗೆ ಶೈಲಿಯಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದ ಮಸ್ತಾನಮ್ಮ, ಇಂದು ನಿಧನರಾಗಿದ್ದು, ಪ್ರೀತಿಯ ಅಜ್ಜಿಯ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!