
ಬೆಂಗಳೂರು(ಜು.4): ಸಿದ್ದರಾಮಯ್ಯ ಅವರನ್ನು ಲಾಸ್ಟ್ ಬೆಂಚ್ ಸ್ಟೂಡೆಂಟ್ ಮಾಡಿದ್ದು ಅವರದ್ದೇ ಪಕ್ಷದ, ಸದ್ಯದ ಡಿಸಿಎಂ ಡಾ. ಜಿ.ಪರಮೇಶ್ವರ. ಹಿಂದೊಮ್ಮೆ ಪಕ್ಷ ಕಟ್ಟಲು ಒಟ್ಟಾಗಿ ದುಡಿದ್ದ ಜೋಡಿಯ ನಡುವೆ ಭಿನ್ನಾಭಿಪ್ರಾಯ ಕಳೆದ ಸರಕಾರದಿಂದಲೂ ಇದ್ದದ್ದನ್ನು ಯಾರು ಅಲ್ಲಗಳೆಯುವಂತಿಲ್ಲ. ಆ ಶೀತಲ ಸಮರವೇ ಇದೀಗ ಲಾಸ್ಟ್ ಬೆಂಚ್ ಪಾಲಿಟಿಕ್ಸ್ ಗೆ ಕಾರಣವಾಗಿದೆ.
ಡಾ. ಜಿ. ಪರಮೇಶ್ವರ ಉದ್ದೇಶಪೂರ್ವಕವಾಗಿಯೇ ಹಠ ಹಿಡಿದು ಸಿದ್ದರಾಮಯ್ಯ ಕೊನೆಯ ಸೀಟ್ ಗೆ ಹಾಕಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನಡೆದುಕೊಂಡಿದ್ದ ರೀತಿಯೇ ಇದಕ್ಕೆ ಕಾರಣವಾಗಿದ್ದು ಸಿದ್ದು ಅವರ ಮಂತ್ರವೇ ಅವರಿಗೆ ತಿರುಗು ಬಾಣವಾಗಿದೆ. ನ
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಪರಮೇಶ್ವರ್ ಗೆ ವಿಧಾನ ಸಭೆಯಲ್ಲಿ ಮೊದಲ ಸಾಲಿನಲ್ಲಿ ಸ್ಥಾನ ಕೊಡಿಸಿರಲಿಲ್ಲ. ಅಂದು ಸದನದ ಮೊದಲ ಸಾಲಿನಲ್ಲಿ ಸೀಟ್ ಪಡೆಯಲು ಪರಮೇಶ್ವರ ಹರಸಾಹಸ ಮಾಡಿದ್ದರು.
ಹಿಂದಿನ ಸರಕಾರದಲ್ಲಿ ಪರಮೇಶ್ವರ ಗೃಹ ಸಚಿವರಾಗಿದ್ದರೂ ಸಂಪುಟದಲ್ಲಿ ನಂಬರ್ ೨ ರೀತಿಯ ಶಿಷ್ಟಾಚಾರ ಕಲ್ಪಿಸಿರಲಿಲ್ಲ. ಅಂದು ತಮಗಾದ ಅನ್ಯಾಯವನ್ನ ಹಿರಿಯ ಮುಖಂಡರ ಮುಂದೆ ಪರಮೇಶ್ವರ ಹೇಳಿಕೊಂಡಿದ್ದರು. ಹಾಗಾಗಿ ಇಂದು ಅದೇ ಮಾತನ್ನು ಬಳಕೆ ಮಾಡಿಕೊಂಡು ಶಾಸಕ ಸ್ಥಾನ ಹೊರತುಪಡಿಸಿ ಬೇರೆನು ಅಲ್ಲದವರಿಗೆ ಮೊದಲ ಎರಡು ಸ್ಥಾನದಲ್ಲಿ ಅವಕಾಶ ಯಾಕೆ ಕೊಡಬೇಕು ಎಂಬಂತೆ ನಡೆದುಕೊಂಡಿದ್ದಾರೆ.ಒಂದೇ ನಿಯಮದ ಹೆಸರಿನಲ್ಲಿ ಸಿದ್ದರಾಮಯ್ಯಗೆ ಲಾಸ್ಟ್ ಬೆಂಚ್ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.