ಗೂಗಲ್'ನಿಂದ ಪ್ರಮುಖ ವಿಕೇಟ್ ಪತನ : ಸಿಒಒ ರಾಜೀನಾಮೆ

First Published Jul 4, 2018, 3:56 PM IST
Highlights
  • ಬ್ರ್ಯಾಂಟ್ 25 ವರ್ಷಗಳಿಂದ ಇಂಟೆಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು.
  • ಕ್ಲೌಡ್ ಸಂಸ್ಥೆಯು ಕಂಪ್ಯೂಟರ್, ಸ್ಟೋರೇಜ್, ಮ್ಯಾನೇಜ್ ಮೆಂಟ್, ಸೆಕ್ಯುರಿಟಿ ಮುಂತಾದ ಗೂಗಲ್ ಸೇವೆಗಳನ್ನು ನಿಭಾಯಿಸುತ್ತದೆ

ವಾಷಿಂಗ್ಟನ್[ಜು.04]: ವಿಶ್ವದ ದೈತ್ಯ ಸಂಸ್ಥೆ ಗೂಗಲ್'ನಿಂದ ಪ್ರಮುಖ ಮುಖ್ಯಸ್ಥರೊಬ್ಬರು ರಾಜೀನಾಮೆ ನೀಡಿದ್ದಾರೆ.

ಅಂಗಸಂಸ್ಥೆಯಾದ ಗೂಗಲ್ ಕ್ಲೌಡ್ ಸಿಒಒ ಡಯೇನ್ ಬ್ರ್ಯಾಂಟ್ ಸಂಸ್ಥೆಯಿಂದ ನಿರ್ಗಮಿಸಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್'ನಲ್ಲಿ ಇಂಟೆಲ್ ಸಂಸ್ಥೆಗೆ ವಿದಾಯ ಹೇಳಿದ್ದ ಡಯೇನ್ ಬ್ರ್ಯಾಂಟ್ ಅವರನ್ನು ಗೂಗಲ್ ಕ್ಲೌಡ್ ಸಿಒಒ ಆಗಿ ನೇಮಕ ಮಾಡಲಾಗಿತ್ತು.

ಬ್ರ್ಯಾಂಟ್ 25 ವರ್ಷಗಳಿಂದ ಇಂಟೆಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ಸಿಒಒ ಆಗಿ ಅಧಿಕಾರ ಸ್ವೀಕರಿಸಿದ ಹಲವು ಹೊಸ ಒತ್ತಡಗಳನ್ನು ನಿಭಾಯಿಸಬೇಕಾಗಿ ಬಂತು. ಸಮಸ್ಯೆಗಳು ನಿವಾರಣೆಯಾಗುವ ಮುನ್ನವೆ ಕಂಪನಿ ತ್ಯಜಿಸಿದ್ದಾರೆ. 

ಕ್ಲೌಡ್ ಸಂಸ್ಥೆಯು , ಕಂಪ್ಯೂಟರ್, ಸ್ಟೋರೇಜ್, ಮ್ಯಾನೇಜ್ ಮೆಂಟ್, ಸೆಕ್ಯೂರಿಟಿ, ಡೆವಲೆಪರ್ ಟೂಲ್ಸ್ ಮುಂತಾದ ತನ್ನದೆ ಅಂಗ ಸಂಸ್ಥೆಗಳ ಮೂಲಕ ಆಪ್ ಹಾಗೂ ವೆಬ್ ಸೈಟ್'ಗಳನ್ನು ಅಭಿವೃದ್ಧಿ ಪಡಿಸುತ್ತದೆ. ಸರ್ವರ್'ಗಳ ನಿಯಂತ್ರಣ ಹಾಗೂ ಹಾರ್ಡ್'ವೇರ್ ಅಳವಡಿಕೆ ಕ್ಲೌಡ್'ನ ಪ್ರಮುಖ ಕಾರ್ಯಗಳಾಗಿದೆ.

 

click me!