2 ರಾಷ್ಟ್ರಗಳ ಮಾಜಿ ಹಾಗೂ ಹಾಲಿ ಚುನಾವಣಾ ಆಯುಕ್ತರ ನಡುವೆ ಅರಳಿದ ಪ್ರೇಮ!

By Internet DeskFirst Published Oct 6, 2016, 11:57 PM IST
Highlights

ಮೆಕ್ಸಿಕೊ(ಅ.07): ಚುನಾವಣಾ ಸುಧಾರಣೆ ಸಂಬಂಧ ನಡೆದಿದ್ದ ಅಂತರರಾಷ್ಟ್ರೀಯ ಸಮಾವೇಶವೊಂದು 2ರಾಷ್ಟ್ರಗಳ ಮಾಜಿ ಮತ್ತು ಹಾಲಿ ಚುನಾವಣಾ ಆಯುಕ್ತರ ವಿವಾಹಕ್ಕೆ ನಾಂದಿ ಹಾಡಿದೆ.

ಕೇಂದ್ರದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಶಿ, ನೇಪಾಳದ ಮುಖ್ಯ ಚುನಾವಣಾ ಆಯುಕ್ತೆ ಇಳಾ ಶರ್ಮಾ ಅವರನ್ನು ವಿವಾಹವಾಗಲಿದ್ದಾರೆ. ಈ ವಿಷಯವನ್ನು ಖುರೇಶಿ ಕುಟುಂಬದ ಸದಸ್ಯರೊಬ್ಬರು ಖಚಿತಪಡಿಸಿದ್ದಾರೆ. ‘ಶೀಘ್ರದಲ್ಲೇ ಶುಭ ಸುದ್ದಿ ಕೇಳಲಿದ್ದೀರಿ’ ಎಂದು ಅವರು ಹೇಳಿದ್ದಾರೆ.

‘ರಾಜಕೀಯದಲ್ಲಿ ಹಣ’ ಎಂಬ ವಿಷಯ ಕುರಿತು 2015ರಲ್ಲಿ ಮೆಕ್ಸಿಕೊದಲ್ಲಿ ಸಮಾವೇಶ ನಡೆದಿತ್ತು. ಈ ವೇಳೆ ಕೇಂದ್ರದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಖುರೇಶಿ ಮತ್ತು ನೇಪಾಳದ ಮುಖ್ಯ ಚುನಾವಣಾ ಆಯುಕ್ತೆ ಶರ್ಮಿಳಾ ಭಾಗವಹಿಸಿದ್ದರು. ಚುನಾವಣಾ ನಿಧಿ, ಮತದಾನದ ಸಂದರ್ಭ ನಡೆಯುವ ಅಕ್ರಮ ಮತ್ತಿತರ ಅನೇಕ ವಿಚಾರಗಳಿಗೆ ಸಂಬಂಧಿಸಿ ಇಬ್ಬರೂ ಸಮಾವೇಶದಲ್ಲಿ ಚರ್ಚಿಸಿದ್ದರು. ಆ ಸಂದರ್ಭ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.

ಇನ್ನು ಶರ್ಮಿಳಾರಿಗೆ ಇಬ್ಬರು ಪುತ್ರಿಯರಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಅವರ ಪತಿ ನವರಾಜ್ ಪೌದೆಲ್ 15 ವರ್ಷಗಳ ಹಿಂದೆ ಮಾವೊ ನುಸುಳುಕೋರರ ದಾಳಿಗೆ ಬಲಿಯಾಗಿದ್ದರು. ಖುರೇಷಿ ಅವರಿಗೂ ವಿಚ್ಚೇಧನವಾಗಿದ್ದು ಇಬ್ಬರಿಗೂ ಇದು ಎರಡನೇ ವಿವಾಹ ಆಗಲಿದೆ.

ಖುರೇಷಿಯವರಿಗೆ 69 ವರ್ಷ ವಯಸ್ಸಾಗಿದ್ದು, ಇಳಾ ಶರ್ಮಾರಿಗೆ 49 ವಯಸ್ಸಾಗಿರುವುದು ವಿಶೇಷವಾಗಿದೆ.

 

click me!