ಯಾವ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಟ್ರೀಟ್’ಮೆಂಟ್ ಪಡೆದರೋ 20 ವರ್ಷಗಳ ನಂತರ ಅದೇ ಆಸ್ಪತ್ರೆಯ ವೈದ್ಯೆಯಾದರು!

By Suvarna Web DeskFirst Published Mar 23, 2018, 4:19 PM IST
Highlights

ಕ್ಯಾನ್ಸರ್ ಬಂದರೆ ಜೀವನವೇ ಮುಗಿದು ಹೋಯಿತು ಅಂದುಕೊಳ್ಳುವವರೇ ಹೆಚ್ಚು. ವಿಲ್ ಪವರ್ ಇದ್ದರೆ ಕ್ಯಾನ್ಸರನ್ನೂ ಗೆಲ್ಲಬಹುದು ಎಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. 

ಬೆಂಗಳೂರು (ಮಾ.23):  ಕ್ಯಾನ್ಸರ್ ಬಂದರೆ ಜೀವನವೇ ಮುಗಿದು ಹೋಯಿತು ಅಂದುಕೊಳ್ಳುವವರೇ ಹೆಚ್ಚು. ವಿಲ್ ಪವರ್ ಇದ್ದರೆ ಕ್ಯಾನ್ಸರನ್ನೂ ಗೆಲ್ಲಬಹುದು ಎಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. 

ಈಕೆಯ ಹೆಸರು ಜೆನ್ನಿಫರ್. 11 ನೇ ವಯಸ್ಸಿನಲ್ಲಿ ಮೂಳೆ ಕ್ಯಾನ್ಸರ್ ಕಾಣಿಸಿಕೊಂಡಿತು. ಕೆಲವು ವರ್ಷಗಳ ತನಕ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಾರೆ. ಹೆಚ್ಚಿನ ವರ್ಷ ಆಸ್ಪತ್ರೆ ಸಿಬ್ಬಂದಿ, ವೈದ್ಯರ ಜೊತೆಯೇ ಕಳೆದಿದ್ದರಿಂದ ಇವರಿಗೂ ವೈದ್ಯೆಯಾಗಬೇಕೆಂಬ ಕನಸು ಹುಟ್ಟಿತು. ಇವರ ಆಸೆಯಂತೆ 20 ವರ್ಷಗಳ ನಂತರ ಇವರ ಆಸೆ ಕೈಗೂಡಿತು. ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೋ ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಆರಂಭಿಸಿದರು. 

ಜೆನ್ನಿಫರ್’ಗೆ ಕಾಣಿಸಿಕೊಂಡಿದ್ದು ಅಪರೂಪದ ಕ್ಯಾನ್ಸರ್. ಸಾಕಷ್ಟು ಥೆರಪಿ, ಸರ್ಜರಿಗೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಕುಟುಂಬದವರು, ಸ್ನೇಹಿತರು, ವೈದ್ಯರ ಪ್ರೋತ್ಸಾಹವನ್ನು ನೆನೆಸಿಕೊಳ್ಳುತ್ತಾರೆ ಜೆನ್ನಿಫರ್.  ಆಸ್ಪತ್ರೆಯಲ್ಲೇ ಬಹುಕಾಲ ಕಳೆದಿದ್ದರಿಂದ ತನ್ನಂತೆ ನರಳುತ್ತಿರುವ ಇತರೆ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ನಿರ್ಧರಿಸುತ್ತಾರೆ.  ಸಾಕಷ್ಟು ಬಾರಿ ಕಿಮೋಥೆರಪಿಗೆ ಒಳಗಾದ ನಂತರ 20 ವರ್ಷಗಳ ನಂತರ ನೀವು ಕ್ಯಾನ್ಸರ್’ನಿಂದ ಗುಣಮುಖರಾಗಿದ್ದೀರಿ. ಮತ್ತೆ ನಿಮಗೆ ಕ್ಯಾನ್ಸರ್ ಮರುಕಳಿಸುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ನಂತರ ಚಿಕಾಗೋದಲ್ಲಿರುವ ಮಿಡ್ ವೆಸ್ಟರ್ನ್ ಯೂನಿವರ್ಸಿಟಿಯಿಂದ ಪದವಿ ಪಡೆಯುತ್ತಾರೆ. ವೈದ್ಯೆಯಾಗಿ ಸೇವೆ ಆರಂಭಿಸುತ್ತಾರೆ. ಮಕ್ಕಳ ಜೊತೆಯೇ ಹೆಚ್ಚು ಕಾಲ ಕಳೆಯುವ ಇವರು ಅವರ ಮುಖದಲ್ಲಿ ನಗು ಅರಳಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. 
 

tags
click me!