
ವಾರಣಾಸಿ(ಮಾ.08): ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟಿವ್ ವಾ ತಮ್ಮ ಸ್ನೇಹಿತನ ಕೊನೆಯ ಆಸೆಯನ್ನು ಭಾರತದಲ್ಲಿ ಈಡೇರಿಸಿದ್ದಾರೆ.
ವಾರಣಾಸಿಯ ಗಂಗಾ ನದಿಯ ಮಣಿಕರ್ಣಿಕಾ ಘಾಟ್'ಗೆ ನಿನ್ನೆ ಮತ್ತೊಬ್ಬ ಸ್ನೇಹಿತ ಜಾನ್ಸನ್ ಜೊತೆ ಆಗಮಿಸಿದ್ದ ಸ್ಟೀವ್ ವಾ ಕೆಲವು ತಿಂಗಳ ಹಿಂದೆ ಮೃತರಾದ ತಮ್ಮ ಸ್ನೇಹಿತ ಸ್ಟೀಪನ್ ಅವರ ಅಸ್ಥಿಯನ್ನು ಪವಿತ್ರ ಗಂಗಾ ನದಿಯಲ್ಲಿ ವಿಸರ್ಜಿಸಿದರು. ಈ ಮೂಲಕ ಅವರು ತಮ್ಮ ಸ್ನೇಹಿತನ ಕೊನೆಯ ಆಸೆಯನ್ನು ಈಡೇರಿಸಿದರು.
ತಾವು ಹಾಗೂ ಸ್ಟೀಫನ್ ಧೀರ್ಘ ಕಾಲದ ಸ್ನೇಹಿತರಾಗಿದ್ದು, ಆತ ಮರಣಿಸಿದಾಗ ಆತನ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ವಿಸರ್ಜಿಸುವುದಾಗಿತ್ತು. ಅಲ್ಲದೆ ಸ್ಟೀಫನ್ ಕೃಷ್ಣ ದೇವರ ಅನನ್ಯ ಭಕ್ತರಾಗಿದ್ದರು. ಆಗಾಗ ಇಸ್ಕಾನ್ ದೇಗುಲಕ್ಕೆ ಭೇಟಿ ನೀಡುತ್ತಿದ್ದರು' ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದವರು ಭಾರತ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಯಾವ ತಂಡ ಜಯಗಳಿಸಿದರೂ ಸಂತಸವೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.