ರೈತರ ಆತ್ಮಹತ್ಯೆ ತಡೆಗೆ ವಿದೇಶಿಗನಿಂದ ಪಾದಯಾತ್ರೆ: ಇಂದು ರಾಜ್ಯಕ್ಕೆ ಆಗಮನ

Published : Aug 16, 2017, 06:39 PM ISTUpdated : Apr 11, 2018, 12:39 PM IST
ರೈತರ ಆತ್ಮಹತ್ಯೆ ತಡೆಗೆ ವಿದೇಶಿಗನಿಂದ ಪಾದಯಾತ್ರೆ: ಇಂದು ರಾಜ್ಯಕ್ಕೆ ಆಗಮನ

ಸಾರಾಂಶ

ಮಂಡ್ಯದ ತೋಟಗಾರಿಕೆ ಕಚೇರಿವರೆಗೂ ಪಾದಯಾತ್ರೆಯಲ್ಲಿ ಜೊತೆ ನೀಡಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿ ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೈಸೂರು(ಆ.16): ದೇಶ‌ ಮತ್ತು ಕರ್ನಾಟಕ ರಾಜ್ಯದಲ್ಲಿ  ರೈತರ ಆತ್ಮಹತ್ಯೆ ತಡೆಯುವ ಮತ್ತು ಆತ್ಮಹತ್ಯೆ  ಮಾಡಿಕೊಂಡ  ರೈತ ಕುಟುಂಬಗಳಿಗೆ ಕನಿಷ್ಠ 1 ಸಾವಿರ ಮಾಶಾಸನ ಕೊಡಿಸುವ ಸಲುವಾಗಿ ವಿದೇಶಿ ಪ್ರಜೆಯೊಬ್ಬರು ಪಾದಯಾತ್ರೆ ಮಾಡುತ್ತಿದ್ದಾರೆ.

ಡೆವೀಡ್ ಅತ್ತೋವೆ(27) ಎಂಬ ಬ್ರಿಟಿಷ್ ಯುವಕ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿ ಇಂದು ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಜಿಲ್ಲೆಗೆ ಪಾದಯಾತ್ರೆಯ ಮೂಲಕ ಆಗಮಿಸಿದ್ದಾನೆ. ಮೈಸೂರು ಮೂಲಕ ಮಂಡ್ಯ ಪ್ರವೇಶಿಸಿದ ಈ ಯುವಕನನ್ನು ಮಂಡ್ಯದ ಜನರಕ್ಷಕ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಕೃಷ್ಣೇಗೌಡ ಮತ್ತು ಹಲವು ರೈತರು ಜಿಲ್ಲೆಯ ಗಡಿ ಭಾಗ ಇಂಡುವಾಳು ಬಳಿ ಸ್ವಾಗತಿಸಿದರು.

ಅಲ್ಲಿಂದ ಮಂಡ್ಯದ ತೋಟಗಾರಿಕೆ ಕಚೇರಿವರೆಗೂ ಪಾದಯಾತ್ರೆಯಲ್ಲಿ ಜೊತೆ ನೀಡಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿ ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಡೆವೀಡ್ ಅತ್ತೋವೆ, ಭಾರತದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ರೈತರ ಪರವಾಗಿ ನಿಲ್ಲುತ್ತಿಲ್ಲ. ರೈತರ ಆತ್ಮಹತ್ಯೆ ತಡೆಗೆ ಸರ್ಕಾರಗಳ ಗಮನ ಸೆಳೆಯುವ ಕಾರಣದಿಂದಾಗಿ ತಾನು ಕನ್ಯಾಕುಮಾರಿಯಿಂದ  ಪಂಜಾಬ್'ವರೆಗೂ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
ಧೋನಿಯನ್ನೇ ಬೆರಗುಗೊಳಿಸಿದ 4ರ ಪೋರಿಯ ಬ್ಯಾಟಿಂಗ್: ವೀಡಿಯೋ ವೈರಲ್