ಪಾಂಡಿಚೆರಿಯಲ್ಲಿ ಮಹಿಳಾ ಸುರಕ್ಷತೆ ಪರೀಕ್ಷಿಸಲು ಕಿರಣ್ ಬೇಡಿ ಮಿಡ್'ನೈಟ್ ರೈಡ್!

By Suvarna Web DeskFirst Published Aug 19, 2017, 10:02 PM IST
Highlights

ಕತ್ತಲಾದ ಮೇಲೆ ಪಾಂಡಿಚೆರಿ ಮಹಿಳೆಯರಿಗೆಷ್ಟು ಸುರಕ್ಷಿತ ಎಂದು ಪರೀಕ್ಷಿಸಲು ಪಾಂಡಿಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಬೈಕಿನಲ್ಲಿ ನೈಟ್ ರೌಂಡ್ಸ್ ಹೋಗಿದ್ದಾರೆ. ಇನ್ನೊಬ್ಬ ಮಹಿಳೆಯೊಂದಿಗೆ ನಗರದ ರಸ್ತೆಗಳಲ್ಲಿ ಬೈಕಿನಲ್ಲಿ ಸುತ್ತು ಹಾಕಿದ್ದು ತಮ್ಮ  ಗುರುತು ಸಿಗಬಾರದೆಂದು ಮುಖಕ್ಕೆ ದುಪ್ಪಟ್ಟಾವನ್ನು ಸುತ್ತಿಕೊಂಡಿದ್ದಾರೆ.

ನವದೆಹಲಿ (ಆ.21): ಕತ್ತಲಾದ ಮೇಲೆ ಪಾಂಡಿಚೆರಿ ಮಹಿಳೆಯರಿಗೆಷ್ಟು ಸುರಕ್ಷಿತ ಎಂದು ಪರೀಕ್ಷಿಸಲು ಪಾಂಡಿಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಬೈಕಿನಲ್ಲಿ ನೈಟ್ ರೌಂಡ್ಸ್ ಹೋಗಿದ್ದಾರೆ. ಇನ್ನೊಬ್ಬ ಮಹಿಳೆಯೊಂದಿಗೆ ನಗರದ ರಸ್ತೆಗಳಲ್ಲಿ ಬೈಕಿನಲ್ಲಿ ಸುತ್ತು ಹಾಕಿದ್ದು ತಮ್ಮ  ಗುರುತು ಸಿಗಬಾರದೆಂದು ಮುಖಕ್ಕೆ ದುಪ್ಪಟ್ಟಾವನ್ನು ಸುತ್ತಿಕೊಂಡಿದ್ದಾರೆ.

ಪಾಂಡಿಚೆರಿ ಮಹಿಳೆಯರಿಗೆ ಸುರಕ್ಷಿತವಾಗಿದೆ. ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ ಎಂದು ಟ್ವೀಟಿಸಿದ್ದಾರೆ. ಕಿರಣ್ ಬೇಡಿಯವರ ಈ ಕೆಲಸವನ್ನು ಸಾಕಷ್ಟು ಜನ ಪ್ರಶಂಸಿದ್ದರೆ ಇನ್ನು ಕೆಲವರು ಕಾನೂನನ್ನು ಉಲ್ಲಂಘಿಸಿದ್ದೀರಿ ಎಂದು ಹೇಳಿದ್ದಾರೆ.

ಬೈಕ್’ನಲ್ಲಿರುವ ಇವರಿಬ್ಬರೂ ಹೆಲ್ಮೇಟ್ ಧರಿಸಿಲ್ಲ. ಪಾಂಡಿಚೇರಿಯಲ್ಲಿ  ದ್ವಿಚಕ್ರ ವಾಹನ ಹಿಂಬದಿ ಸವಾರರಿಗೆ ಹೆಲ್ಮೇಟ್ ಕಡ್ಡಾಯವೇನಿಲ್ಲ. ಆದರೆ ಮೇ 1 ರಿಂದ ಹೆಲ್ಮೇಟ್ ಧರಿಸುವುದನ್ನು ಮುಖ್ಯಮಂತ್ರಿ ವಿ.ನಾರಾಯಣಸಾಮಿ ಕಡ್ಡಾಯಗೊಳಿಸಿದ್ದರು.

click me!