
ಚೀನಾ ವಸ್ತು ಹಾಗೂ ಯಂತ್ರಗಳ ಕಳ್ಳ ಸಾಗಣೆ ಕುರಿತು ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಮ್ಮ ದೇಶದ ಕೆಲ ಭ್ರಷ್ಟ ಆಮದುದಾರರು ಚೀನಾ ಜೊತೆ ಕೈಜೋಡಿಸಿ ತೆರಿಗೆ ವಂಚಿಸಿ ಹವಾಲ ಮೂಲಕ ವ್ಯವಹಾರ ಮಾಡುತ್ತಿರೋ ಡೆಡ್ಲಿ ಸೀಕ್ರೆಟ್ ಸುವರ್ಣ ನ್ಯೂಸ್ನ ಕವರ್ಸ್ಟೋರಿ ನಡೆಸಿರೋ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು ಮಾಡಿತ್ತು. ಇದೀಗ ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಎಲ್ಲೆಲ್ಲಿ ಚೀನಾ ತೂಕ ಯಂತ್ರ ಬಳಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆಯೋ ಆ ಎಲ್ಲಾ ಕಡೆ ದಾಳಿ ನಡೆಸಿದ್ದೇವೆ. ಸುಮಾರು 394 ಕಡೆ ದಾಳಿ ನಡೆಸಿ ಒಟ್ಟು 71 ಕೇಸ್ ದಾಖಲಿಸಲಾಗಿದೆ ಎಂದು ಸುವರ್ಣ ನ್ಯೂಸ್ಗೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.