ಪರಿಹಾರದ ಆಸೆಗಾಗಿ ಹುಲಿ ಬಾಯಿಗೆ ವೃದ್ಧರ ಆಹಾರ!

Published : Jul 06, 2017, 10:53 PM ISTUpdated : Apr 11, 2018, 01:12 PM IST
ಪರಿಹಾರದ ಆಸೆಗಾಗಿ ಹುಲಿ ಬಾಯಿಗೆ ವೃದ್ಧರ ಆಹಾರ!

ಸಾರಾಂಶ

ಪೀಲಿಭೀತ್‌ನಲ್ಲಿ ಹುಲಿ ಅಭಯಾರಣ್ಯ ಇದೆ. ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವರು ಸಾವನ್ನಪ್ಪಿದರೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಅರಣ್ಯಕ್ಕೆ ವೃದ್ಧರನ್ನು ಯಾವುದೋ ಕಾರಣ ಹೇಳಿ ಕಳಿಸಲಾಗುತ್ತದೆ. ಅಲ್ಲಿ ಅವರು ಹುಲಿ ದಾಳಿಗೆ ಬಲಿಯಾದಾಗ ಅವರ ಶವವನ್ನು ಅಭಯಾರಣ್ಯ ವ್ಯಾಪ್ತಿಯಿಂದ ಹೊರಗಿರುವ ಕೃಷಿ ಜಮೀನಿನಲ್ಲಿ ತಂದು ಹಾಕಲಾಗುತ್ತದೆ. ಆಗ ನಾಗರಿಕ ಪ್ರದೇಶಕ್ಕೆ ನುಗ್ಗಿ ಹುಲಿ ದಾಳಿ ನಡೆಸಿದೆ ಎಂದು ಸುಳ್ಳು ಹೇಳಿ ಸರ್ಕಾರದಿಂದ ಪರಿಹಾರ ಪಡೆಯಲಾಗುತ್ತಿದೆ.

ಪೀಲಿಭೀತ್(ಜು.06): ಸರ್ಕಾರದಿಂದ ಬರುವ ಪರಿಹಾರದ ಆಸೆಗಾಗಿ ತಮ್ಮ ಕುಟುಂಬದ ವೃದ್ಧರನ್ನು ಅರಣ್ಯಕ್ಕೆ ಕಳಿಸಿ ಹುಲಿಗೆ ಆಹಾರ ನೀಡುವ ಹೇಯ ಘಟನೆಗಳು ಉತ್ತರಪ್ರದೇಶದ ಪೀಲಿಭೀತ್‌ನಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಳೆದ ಕೆಲ ತಿಂಗಳಲ್ಲಿ ಇಂಥ ಹಲವಾರ ಅತ್ಯಂತ ಹೇಯ ಘಟನಾವಳಿಗಳು ನಡೆದಿವೆ ಎನ್ನಲಾಗಿದೆ.

ಪೀಲಿಭೀತ್‌ನಲ್ಲಿ ಹುಲಿ ಅಭಯಾರಣ್ಯ ಇದೆ. ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾನವರು ಸಾವನ್ನಪ್ಪಿದರೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಅರಣ್ಯಕ್ಕೆ ವೃದ್ಧರನ್ನು ಯಾವುದೋ ಕಾರಣ ಹೇಳಿ ಕಳಿಸಲಾಗುತ್ತದೆ. ಅಲ್ಲಿ ಅವರು ಹುಲಿ ದಾಳಿಗೆ ಬಲಿಯಾದಾಗ ಅವರ ಶವವನ್ನು ಅಭಯಾರಣ್ಯ ವ್ಯಾಪ್ತಿಯಿಂದ ಹೊರಗಿರುವ ಕೃಷಿ ಜಮೀನಿನಲ್ಲಿ ತಂದು ಹಾಕಲಾಗುತ್ತದೆ. ಆಗ ನಾಗರಿಕ ಪ್ರದೇಶಕ್ಕೆ ನುಗ್ಗಿ ಹುಲಿ ದಾಳಿ ನಡೆಸಿದೆ ಎಂದು ಸುಳ್ಳು ಹೇಳಿ ಸರ್ಕಾರದಿಂದ ಪರಿಹಾರ ಪಡೆಯಲಾಗುತ್ತಿದೆ.

ಫೆಬ್ರವರಿ 16ರಿಂದ ಈಚೆಗೆ ಇಂತಹ 7 ಘಟನೆಗಳು ಸಂಭವಿಸಿದ್ದು, ಮೃತರಲ್ಲಿ ವಯಸ್ಸಾದವರೇ ಹೆಚ್ಚಿದ್ದಾರೆ. ಹೀಗಾಗಿ ಈ ಬಗ್ಗೆ ಸಂದೇಹಗೊಂಡು ರಾಷ್ಟ್ರೀಯ ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿ ತನಿಖೆ ನಡೆಸಿದಾಗ, ಸಾವುಗಳೆಲ್ಲ ಶಂಕಾಸ್ಪದ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಕಾರಕ್ಕೆ ಅದು ಶಿಫಾರಸು ಮಾಡಿದೆ.

ಆದರೆ ಕುಟುಂಬಗಳು ಹೇಳೋದೇ ಬೇರೆ. ‘ಹಿರಿಯರು ತಾವಾಗೇ ಈ ಕೆಲಸಕ್ಕೆ ಮುಂದಾಗಿದ್ದಾರೆ. ಅರಣ್ಯದಿಂದ ನಮಗೆ ಯಾವುದೇ ಸಂಪನ್ಮೂಲ ಪಡೆಯುವುದರಿಂದ ನಿರ್ಬಂಧ ವಿಸಲಾಗಿದೆ. ಹೀಗಾಗಿ ಬಡತನದಿಂದ ಹೊರಬರಲು ಈ ಕೆಲಸ ಅನಿವಾರ್ಯ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರ ಸ್ಥಳೀಯ ಚುನಾವಣೆ; ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA
ವೈರಲ್ ಆಗ್ತಿದೆ ಕನ್ನಡದಲ್ಲಿ ಮುದ್ರಣಗೊಂಡಿರುವ 1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ