ಬಜೆಟ್ ಬಂಪರ್; ಬೆಂಗಳೂರಿಗೆ ಬರಲಿದೆ ಸಬರ್ಬನ್ ರೈಲು; ಪ್ರಯಾಣಿಕರಿಗೆ ಆಗಲಿದೆ ಅನುಕೂಲ

Published : Feb 01, 2018, 02:36 PM ISTUpdated : Apr 11, 2018, 12:55 PM IST
ಬಜೆಟ್ ಬಂಪರ್; ಬೆಂಗಳೂರಿಗೆ ಬರಲಿದೆ ಸಬರ್ಬನ್ ರೈಲು; ಪ್ರಯಾಣಿಕರಿಗೆ ಆಗಲಿದೆ ಅನುಕೂಲ

ಸಾರಾಂಶ

ಈ ಬಾರಿ ಬಜೆಟ್'ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಬಹು ಕಾಲಗಳಿಂದ ನನೆಗುದಿಗೆ ಬಿದ್ದಿದ್ದ ಸಬರ್ಬನ್ ರೈಲ್ವೇ ಯೋಜನೆಗೆ ಅನುದಾನ ಸಿಕ್ಕಿದೆ.

ಬೆಂಗಳೂರು (ಫೆ.01): ಈ ಬಾರಿ ಬಜೆಟ್'ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ಸಿಕ್ಕಿದೆ. ಬಹು ಕಾಲಗಳಿಂದ ನನೆಗುದಿಗೆ ಬಿದ್ದಿದ್ದ ಸಬರ್ಬನ್ ರೈಲ್ವೇ ಯೋಜನೆಗೆ ಅನುದಾನ ಸಿಕ್ಕಿದೆ.

ಈ ಯೋಜನೆಗೆ 17 ಸಾವಿರ ಕೋಟಿ ರೂ ಅನುದಾನ ಸಿಕ್ಕಿದೆ. ಇದು ಮೆಟ್ರೋಗೆ ಸಂಪರ್ಕ ಕಲ್ಪಿಸಲಿದೆ. ಇದು ಬೆಂಗಳೂರಿನ ಜನಕ್ಕೆ ನಿಜಕ್ಕೂ ಅನುಕೂಲವಾಗಲಿದೆ. 160 ಕಿಮೀ ರೈಲ್ವೇ ನೆಟ್'ವರ್ಕ್ ಇರಲಿದೆ. ಬೆಂಗಳೂರಿಗೆ ಸಬರ್ಬನ್ ರೈಲ್ವೇ ಯೋಜನೆ ಸಿಕ್ಕಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ವಿ ಸದಾನಂದ ಗೌಡ ರೈಲ್ವೇ ಮಂತ್ರಿಯಾಗಿದ್ದಾಗ ಭರವಸೆ ನೀಡಿದ್ದರು.

ಸಬರ್ಬನ್ ರೈಲ್ವೇ ಯೋಜನೆಗೆ ಸಿದ್ದರಾಮಯ್ಯ ನೇತೃತ್ವದ ಸರಕಾರವು  ಅನುಮೋದನೆ ನೀಡಿದ್ದು 350 ಕೋಟಿ ರೂ ಮೀಸಲಿರಿಸಿದೆ. ಪೂರ್ತಿ 440 ಕಿಮೀ ಯೋಜನೆಗೆ 10, 500 ಕೋಟಿ ತಗುಲಲಿದೆ.

ಏನಿದು ಸಬ್ ಅರ್ಬನ್ ರೈಲು ?

ಬೆಂಗಳೂರು ಸುತ್ತಮುತ್ತ ರುವ ರಾಮನಗರ, ಮಂಡ್ಯ, ತುಮಕೂರು, ದೊಡ್ಡ ಬಳ್ಳಾಪುರ, ಚಿಕ್ಕ ಬಳ್ಳಾಪಿರ ಮುಂತಾದ ನಗರಗಳೊಡನೆ ಈ ರೈಲಿನ ಮೂಲಕ ಸಂಪರ್ಕ ಕಲ್ಪಿಸಲಾಗುವುದು. ಇದಕ್ಕೆ ಮೆಟ್ರೋ ರೈಲಿನೊಂದಿಗೆ ಸಂಪರ್ಕ ಕಲ್ಪಿಸಿದರೆ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಹೊರ ನಗರಗಳಿಂದ ಆಗಮಿಸುವ ಉದ್ಯೋಗಿಗಳಿಗಂತೂ ವರದಾನವಾಗಿದೆ.  

 

 

 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ
ಪಶ್ಚಿಮ ಬಂಗಾಳದಲ್ಲಿ 1 ಕೋಟಿ ನಕಲಿ ಮತದಾರರಿಗೆ ಕೊಕ್ ಸಾಧ್ಯತೆ