
ವಿತ್ತ ಸಚಿವ ಅರುಣ್ ಜೇಟ್ಲಿ 2018-19ನೇ ಸಾಲಿನ ಬಜೆಟ್ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಜೇಟ್ಲಿ ಆಯವ್ಯಯ ಪತ್ರವನ್ನು ಮಂಡಿಸಿದ್ದಾರೆ. ಈ ಬಜೆಟ್'ನಲ್ಲಿ ಗಮನ ಸೆಳೆದ ಆಯ್ದ ಅಂಶಗಳೆಂದರೆ...
* ಮೋದಿ ಹೆಲ್ತ್ ಸ್ಕೀಂನಿಂದ ದೇಶದ 10 ಕೋಟಿಗೂ ಅಧಿಕ ಕುಟುಂಬಕ್ಕೆ ಅನುಕೂಲ.
* ಮೊಬೈಲ್ ಫೋನ್'ಗಳ ಮೇಲಿನ ಆಮದು ಸುಂಕ ಶೇ.20% ಹೆಚ್ಚಿಸಿರುವುದರಿಂದ ಮೊಬೈಲ್'ಗಳು ದುಬಾರಿಯಾಗಲಿವೆ.
* ಆರೋಗ್ಯ ಹಾಗೂ ಶಿಕ್ಷಣದ ಮೇಲಿನ ಸೆಸ್ 4% ಗೆ ಹೆಚ್ಚಿಸಲಾಗಿದೆ.
* ವಾರ್ಷಿಕ 250 ಕೋಟಿಗೂ ಅಧಿಕ ವ್ಯವಹಾರ ನಡೆಸುವ ಕಂಪನಿಗಳಿಗೆ 25% ತೆರಿಗೆ ವಿಧಿಸಲಾಗಿದೆ.
* ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಇಂಟರ್'ನೆಟ್ ಅವಕಾಶ ಕಲ್ಪಿಸುವ ಉದ್ದೇಶದಿಂದ 5 ಲಕ್ಷ ವೈಫೈ ಹಾಟ್'ಸ್ಪಾಟ್ ನಿರ್ಮಿಸಿಲು ಯೋಜಿಸಲಾಗಿದೆ.
* 2019ರೊಳಗಾಗಿ 4 ಲಕ್ಷ ಕಿ.ಮೀ ರೈಲ್ವೇ ಟ್ರ್ಯಾಕ್ ನಿರ್ಮಿಸುವ ಗುರಿ
* ಜನ್ ಧನ್ ಯೋಜನೆಯಡಿ 60 ಕೋಟಿ ಬ್ಯಾಂಕ್ ಅಕೌಟ್ ಮಾಡಿಸುವ ಗುರಿಯನ್ನು ಸರ್ಕಾರ ಹೊಂದಿದೆ.
* ಮುದ್ರಾ ಯೋಜನೆಯಡಿ 3 ಲಕ್ಷ ಕೋಟಿ ಸಾಲ ನೀಡುವ ಗುರಿ
* 2022ರ ವೇಳೆಗೆ ದೇಶದ ಎಲ್ಲ ಬಡವರಿಗೆ ಮನೆ ನಿರ್ಮಾಣದ ಪ್ರತಿಜ್ಞೆ
* ಉಜ್ವಲ ಯೋಜನೆಯಡಿ ಗ್ರಾಮೀಣ ಪ್ರದೇಶದ 8 ಕೋಟಿ ಮಹಿಳೆಯರ ಮನೆಗೆ LPG ಸಂಪರ್ಕ ಕಲ್ಪಿಸುವ ಗುರಿ.
* 70 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿಯನ್ನು ಘೋಷಣೆ ಮಾಡಿದ ಜೇಟ್ಲಿ.
* 500 ನಗರಗಳಿಗೆ ಕುಡಿಯುವ ನೀರು ಪೂರೈಕೆಗೆ ಅಮೃತ್ ಯೋಜನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.