ಫ್ಲೋರಿಡಾ(ಅ.06): ಯುವತಿಯೊಬ್ಬಳು ತನ್ನ ನೆರೆಮನೆಯ ಮತ್ತೊಬ್ಬ ಯುವತಿಗೆ ಹೊಡೆಯಲು ಹೋಗಿ ತಾನೇ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಮೆರಿಕದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಮನೆ ಹತ್ತಿರ ನಿಂತಿದ್ದ ಆ್ಯಂಬರ್'ಗೆ ಕೆಂಪು ಟಾಪ್ ಧರಿಸಿದ್ದ ಯುವತಿಯೊಬ್ಬಳು ಓಡಿಬಂದು ಹೊಡೆಯಲು ಮುಂದಾಗುತ್ತಾಳೆ. ಆಗ ಆ್ಯಂಬರ್ ಆಕೆಯನ್ನು ನೆಲಕ್ಕೆ ಬೀಳಿಸಿ ಜುಟ್ಟು ಹಿಡಿದು ಮುಖ ಮೂತಿ ನೋಡದೆ ಬಾರಿಸಿದ್ದಾಳೆ. ನನ್ನ ಜಡೆ ಬಿಟ್ಟು ಬಿಡು ಎಂದು ಆ ಯುವತಿ ಕೇಳಿಕೊಂಡರೂ ಆ್ಯಂಬರ್ ಸುಮ್ಮನಾಗಲಿಲ್ಲ.
ಜಗಳ ಶುರು ಮಾಡಿದ ಯುವತಿ ಸಾಕಪ್ಪ ಇವಳ ಸಹವಾಸ..! ಅಂತ ಅಲ್ಲಿಂದ ಕಾಲ್ಕಿತ್ತರೂ ಅವಳನ್ನು ಹಿಂಬಾಲಿಸಿ ಆ್ಯಂಬರ್ ಮತ್ತೆ ಹೊಡೆದಿದ್ದಾಳೆ.