669 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ ಫ್ಲಿಪ್‌ಕಾರ್ಟ್ ಸಂಸ್ಥಾಪಕ

By Web DeskFirst Published Jan 3, 2019, 1:09 PM IST
Highlights

ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಲ್ ಅವರ 2018-19 ನೇ ಸಾಲಿನ ಮೊದಲ ತ್ರೈಮಾಸಿಕದ ಅವಧಿಗೆ 699 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ್ದಾರೆ.  ಇದರಲ್ಲಿ ಫಿಪ್‌ಕಾರ್ಟ್ ಅನ್ನು ಅಮೆರಿಕ ಮೂಲದ ವಾಲ್‌ಮಾರ್ಟ್‌ಗೆ ಮಾರಿದ್ದರ ಬಂಡವಾಳ ಸ್ವೀಕೃತಿ ತೆರಿಗೆಯೂ ಸೇರಿದೆ. 

ನವದೆಹಲಿ (ಜ. 03): ಫ್ಲಿಪ್‌ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಲ್ ಅವರು 2018-19 ನೇ ಸಾಲಿನ ಮೊದಲ ತ್ರೈಮಾಸಿಕದ ಅವಧಿಗೆ 699 ಕೋಟಿ ರು. ಮುಂಗಡ ತೆರಿಗೆ ಪಾವತಿಸಿದ್ದಾರೆ. ಇದರಲ್ಲಿ ಫಿಪ್‌ಕಾರ್ಟ್ ಅನ್ನು ಅಮೆರಿಕ ಮೂಲದ ವಾಲ್‌ಮಾರ್ಟ್‌ಗೆ ಮಾರಿದ್ದರ ಬಂಡವಾಳ ಸ್ವೀಕೃತಿ ತೆರಿಗೆಯೂ ಸೇರಿದೆ.

ಇದೇ ವೇಳೆ ಸಹ ಸಂಸ್ಥಾಪಕ ಹಾಗೂ ಸೋದರ ಬಿನ್ನಿ ಬನ್ಸಲ್ ಫಿಪ್‌ಕಾರ್ಟ್‌ನಲ್ಲಿಯ ತಮ್ಮ ಷೇರುಗಳ ಮಾರಾಟ ಮಾಡಿದ್ದರ ಬಂಡವಾಳ ಸ್ವೀಕೃತಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಫಿಪ್ ಕಾರ್ಟ್ ಷೇರು ಮಾರಿದ್ದರಿಂದ ಪಡೆದ ಬಂಡವಾಳ ಸ್ವೀಕೃತಿಗಳನ್ನು ಬನ್ಸಲ್ ಮತ್ತು ಇತರ ಪಾಲುದಾರರಿಗೆ ಐಟಿ ಇಲಾಖೆ ನೋಟಿಸ್ ನೀಡಿತು 

click me!