
ಲಂಡನ್: ಏಳು ದೇಶಗಳಲ್ಲಿ ಹಾದು ಹೋಗುವ, 12 ಸಾವಿರ ಕಿ.ಮೀ. ದೂರವನ್ನು 17 ದಿನಗಳಲ್ಲಿ ಕ್ರಮಿಸುವ ಲಂಡನ್- ಚೀನಾ ನಡುವಣ ಪ್ರಥಮ ಸರಕು ಸಾಗಣೆ ರೈಲು ಸೋಮವಾರ ತನ್ನ ಯಾನ ಆರಂಭಿಸಿದೆ.
ರೈಲಿನಲ್ಲಿ 30 ಸರಕು ಸಾಗಣೆ ಬೋಗಿಗಳಿದ್ದು, ಅದರಲ್ಲಿ ವಿಸ್ಕಿ, ತಂಪುಪಾನೀಯ, ವಿಟಮಿನ್ ಹಾಗೂ ಔಷಧ ಪದಾರ್ಥಗಳನ್ನು ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ.
ಎಸ್ಸೆಕ್ಸ್‌ನಿಂದ ಹೊರಟಿರುವ ರೈಲು ಏ.27ರಂದು ಪೂರ್ವ ಚೀನಾ ಪ್ರಾಂತ್ಯದ ಝೇಜಿಯಾಂಗ್ ಅನ್ನು ತಲುಪಲಿದೆ. ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೋಲೆಂಡ್, ಬೆಲಾರಸ್, ರಷ್ಯಾ, ಕಜಕಿಸ್ತಾನಗಳನ್ನು ಹಾದು ಹೋಗಲಿದೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.