ವಿಮಾನ ಹತ್ತದೆ, ರೈಲಿನಲ್ಲೇ ತೆರಳಿದ ಗಾಯಕವಾಡ್‌

By Suvarna Web DeskFirst Published Apr 11, 2017, 7:19 AM IST
Highlights

ಈ ಬಗ್ಗೆ ಮಾತನಾಡಿದ ಅವರ ಆಪ್ತ ಕಾರ್ಯದರ್ಶಿ ಕೃಷ್ಣ ನಾಮ, ‘ರವೀಂದ್ರ ಗಾಯಕ್‌ವಾಡ್‌ ಅವರು ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣವೇ ಹೆಚ್ಚು ಅನುಕೂಲಕರ ಎಂದು ಪರಿಗಣಿಸಿದ್ದಾರೆ. ಹಾಗಾಗಿ, ಅವರು ರೈಲಿನಲ್ಲೇ ತೆರಳಿದ್ದಾರೆ' ಎಂದು ಸ್ಪಷ್ಟಪಡಿಸಿದರು.

ಪುಣೆ: ಏರ್‌ ಇಂಡಿಯಾ ಹಿರಿಯ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್‌ವಾಡ್‌ ಸೋಮವಾರದ ಸಂಸತ್ತಿನ ಕಲಾಪಕ್ಕೆ ಹಾಜರಾಗಲು ಮುಂಬೈನಿಂದ ನವದೆಹಲಿಗೆ ಏರ್‌ ಇಂಡಿಯಾ ವಿಮಾನ ಟಿಕೆಟ್‌ ಕಾಯ್ದಿರಿಸಿದ ಹೊರತಾಗಿಯೂ, ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲೇ ರಾಜಧಾನಿಗೆ ತೆರಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರ ಆಪ್ತ ಕಾರ್ಯದರ್ಶಿ ಕೃಷ್ಣ ನಾಮ, ‘ರವೀಂದ್ರ ಗಾಯಕ್‌ವಾಡ್‌ ಅವರು ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣವೇ ಹೆಚ್ಚು ಅನುಕೂಲಕರ ಎಂದು ಪರಿಗಣಿಸಿದ್ದಾರೆ. ಹಾಗಾಗಿ, ಅವರು ರೈಲಿನಲ್ಲೇ ತೆರಳಿದ್ದಾರೆ' ಎಂದು ಸ್ಪಷ್ಟಪಡಿಸಿದರು.

ಏರ್ ಇಂಡಿಯಾ ಅದಿಕಾರಿ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆಮ ಕಾರಣಕ್ಕೆ ಏರ್ ಇಂಡಿಯಾ ಹಾಗೂ ಖಾಸಗಿ ವಿಮಾನಯಾನ ಸಂಸ್ಥೆಗಳು ಗಾಯಕ್ವಾಡ್'ಗೆ ನಿಷೇಧ ಹೇರಿದ್ದವು. ಬಳಿಕ ಸರ್ಕಾರದ ಆದೇಶದಂತೆ ನಿಷೇಧವನ್ನು ಹಿಂಪಡೆಯಲಾಗಿತ್ತು.

click me!