ಮುಖ್ಯಮಂತ್ರಿಯಾಗಿದ್ದವರನ್ನೇ ಸೋಲಿಸಿದ್ದ ಸಂತೋಷ್ ಹೆಗ್ಡೆ ಅವರ ತಂದೆ

By Suvarna Web DeskFirst Published Apr 12, 2018, 4:30 PM IST
Highlights

ತುರ್ತುಪರಿಸ್ಥಿತಿ ಮುಗಿದು ಹೊಸದಾಗಿ ಚುನಾವಣೆ ಆರಂಭಗೊಂಡಿದ್ದವು. ದೇಶದಾದ್ಯಂತ ಆಡಳಿತ ವಿರೋಧಿ ಅಲೆ ಇತ್ತು. ಕಾಂಗ್ರೆಸ್ ಪಕ್ಷ ಹನುಮಂತಯ್ಯ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು.

ಸಂತೋಷ್ ಹೆಗ್ಡೆ ಯಾರಿಗೆ ಗೊತ್ತಿಲ್ಲ ಹೇಳಿ. ಇಂದಿನ ಪೀಳಿಗೆಯವರು ಅವರ ಬಗ್ಗೆ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಲೋಕಾಯುಕ್ತರಾಗಿದ್ದ ಅವರು ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದರು. ಯಾವುದೇ ಭ್ರಷ್ಟಾಚಾರ ಪ್ರಕರಣಗಳು ಕಾಣಿಸಿಕೊಂಡಾಗ ಹೋರಾಟದ ಮುಂಚೂಣಿಯಲ್ಲಿ ಅವರಿರುತ್ತಾರೆ.

40 ವರ್ಷಗಳ ಹಿಂದೆ ಸಂತೋಷ್ ಹೆಗ್ಡೆ ಅವರ ತಂದೆ ಕೆ.ಎಸ್. ಹೆಗ್ಡೆ ಬೆಂಗಳೂರು ದಕ್ಷಿಣದಿಂದ ಭಾರತೀಯ ಲೋಕದಳದಿಂದ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ತರ್ಧೆ ಮಾಡಿದ್ದವರು ಮಾಜಿ ಮುಖ್ಯಮಂತ್ರಿಗಳಾದ ಕೆ.ಹನುಮಂತಯ್ಯನವರು. ಆಗಿನ ಕಾಲಕ್ಕೆ ಅವರು ಘಟಾನುಘಟಿ ನಾಯಕ. ಮಾಜಿ ಮುಖ್ಯಮಂತ್ರಿ, ಮಾಜಿ ರೈಲ್ವೆ ಮಂತ್ರಿಗಳಾಗಿ ಕೂಡ ಕಾರ್ಯ ನಿರ್ವಹಿಸಿದ್ದವರು.

ತುರ್ತುಪರಿಸ್ಥಿತಿ ಮುಗಿದು ಹೊಸದಾಗಿ ಚುನಾವಣೆ ಆರಂಭಗೊಂಡಿದ್ದವು. ದೇಶದಾದ್ಯಂತ ಆಡಳಿತ ವಿರೋಧಿ ಅಲೆ ಇತ್ತು. ಕಾಂಗ್ರೆಸ್ ಪಕ್ಷ ಹನುಮಂತಯ್ಯ ಅವರನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಂಡಾಗ 40 ಸಾವಿರ ಮತಗಳ ಅಂತರದಲ್ಲಿ ಹೆಗ್ಡೆ ಅವರು ಕೆಂಗಲ್ ವಿರುದ್ಧ ಜಯಗಳಿಸಿದರು. ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಕೆ.ಎಸ್.ಹೆಗ್ಡೆ ಅವರನ್ನು ಲೋಕಸಭಾ ಸ್ಪೀಕರ್ ಆಗಿ ಆಯ್ಕೆ ಮಾಡಲಾಯಿತು. 1977-80ರವರೆಗೆ ಮೂರು ವರ್ಷಗಳ ಕಾಲ ಸ್ಪೀಕರ್ ಆಗಿ ಕೂಡ ಕಾರ್ಯ ನಿರ್ವಹಿಸಿದರು.

click me!