ಯುವತಿಗೆ ಅಶ್ಲೀಲ ಚಿತ್ರ ಕಳಿಸಿದ ವಕೀಲ : ಸೈಬರ್ ಅಪರಾಧದಡಿ ಶಿಕ್ಷೆಗೆ ಗುರಿಯಾದ

Published : Sep 08, 2018, 10:04 AM ISTUpdated : Sep 09, 2018, 09:16 PM IST
ಯುವತಿಗೆ ಅಶ್ಲೀಲ ಚಿತ್ರ ಕಳಿಸಿದ ವಕೀಲ : ಸೈಬರ್ ಅಪರಾಧದಡಿ ಶಿಕ್ಷೆಗೆ ಗುರಿಯಾದ

ಸಾರಾಂಶ

ರಾಜ್ಯದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿದೆ. ಪರಿಚಿತ ಯುವತಿಗೆ ಅಶ್ಲೀಲ ಚಿತ್ರ ಕಳಿಸಿದ ವಕೀಲಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

ಬೆಂಗಳೂರು :  ರಾಜ್ಯದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ತನ್ನ ಪರಿಚಿತ ಯುವತಿಯೊಬ್ಬಳಿಗೆ ಅಶ್ಲೀಲ ಫೋಟೋಗಳನ್ನು ಇ-ಮೇಲ್ ಮಾಡಿದ ತಪ್ಪಿಗೆ ಎರಡು ವರ್ಷಗಳ ಜೈಲುವಾಸಕ್ಕೆ ವಕೀಲ ರೊಬ್ಬರು ಗುರಿಯಾಗಿದ್ದಾರೆ.

ಬೆಂಗಳೂರಿನ ವಕೀಲ ಶಿವ ಪ್ರಸಾದ್ ಸಜ್ಜನ್ ಎಂಬುವರೇ ಶಿಕ್ಷೆಗೆ ಒಳಗಾಗಿದ್ದು, 2008 ರಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಸಜ್ಜನ್ ವಿರುದ್ಧ ಅವರ ಪರಿಚಿತ ಯುವತಿ ದೂರು ಕೊಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯವು, ಶುಕ್ರವಾರ ಆರೋಪಿಗೆ 25  ಸಾವಿರ ದಂಡ ಹಾಗೂ 2  ವರ್ಷಗಳು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. 

ನನ್ನ ಫೋಟೋಗಳನ್ನು ತಿರುಚಿ ಅಶ್ಲೀಲ ಫೋಟೋಗ ಳನ್ನು ಇ-ಮೇಲ್ ಮೂಲಕ ಸ್ನೇಹಿತರಿಗೆ ಕಳುಹಿಸಿ ಗೌರವಕ್ಕೆ ಕುಂದು ತಂದಿದ್ದಾರೆ ಎಂದು ಆರೋಪಿಸಿ ಸಜ್ಜನ್ ವಿರುದ್ಧ ಸಂತ್ರಸ್ತೆ ದೂರು ಕೊಟ್ಟಿದ್ದರು. ಅದರನ್ವಯ ಐಟಿ ಕಾಯ್ದೆ ಸೆಕ್ಷನ್ 67 ರ ಅಡಿ ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, 1 ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು ಎಂದು ಸೈಬರ್ ವಿಭಾಗದ ಎಸ್ಪಿ ಸಚಿನ್ ಘೋರ್ಪಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಶ್ಲೀಲ ಕಂಟೆಂಟ್: ಎಕ್ಸ್‌ಗೆ ಕೇಂದ್ರದಿಂದ ನೋಟಿಸ್, 72 ಗಂಟೆಯೊಳಗೆ ಉತ್ತರಿಸಲು ಸೂಚನೆ
ಚುನಾವಣೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಅಬ್ಬರ! ಮತದಾನಕ್ಕೆ ಮೊದಲೇ 66 ಸ್ಥಾನಗಳು ಮೈತ್ರಿ ಪಾಲಿಗೆ!