NEWS

ಮಾರಮ್ಮ ದೇವಿ ಪ್ರಸಾದ ದುರಂತ: 7 ಮಂದಿ ಮೇಲೆ ಎಫ್‌ಐಆರ್

16, Dec 2018, 1:52 PM IST

ಚಾಮರಾಜನಗರ ಸುಳ್ವಾಡಿ ಮಾರಮ್ಮ ದೇಗುಲದ ಪ್ರಸಾದ ದುರಂತ ಕೇಸ್ ನಲ್ಲಿ ಏಳು ಜನರ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾದ ರಾಜಮ್ಮ ಹೇಳಿಕೆ ಆಧರಿಸಿ ದೂರು ದಾಖಲು ಮಾಡಲಾಗಿದೆ.  ಚಿನ್ನಪ್ಪಿ, ಮಹದೇವ ಸ್ವಾಮಿ, ಅಡುಗೆ ಭಟ್ಟ ಪುಟ್ಟಸ್ವಾಮಿ, ವೀರಣ್ಣ, ಲೋಕೇಶ್ ಹಾಗೂ ಪೂಜಾರಿ ಮಹದೇವ ಸೇರಿ ಒಟ್ಟು ಏಳು ಮಂದಿ ಮೇಲೆ ಎಫ್ ಐ ಆರ್ ದಾಖಲಾಗಿದೆ.