ಆಸ್ಪತ್ರೆಯಲ್ಲಿ ಬೆಂಕಿ : ಸಮಯಪ್ರಜ್ಞೆ ಮೆರೆದು 19 ಶಿಶುಗಳ ರಕ್ಷಿಸಿದ ನರ್ಸ್

By Suvarna Web DeskFirst Published Mar 3, 2018, 9:09 AM IST
Highlights

ನವಜಾತ ಶಿಶುಗಳ ತೀವ್ರ ನಿಗಾಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನರ್ಸ್‌ಗಳಿಬ್ಬರ ಸಮಯ ಪ್ರಜ್ಞೆಯಿಂದ 19 ನವಜಾತ ಶಿಶುಗಳು ಪ್ರಾಣಾಪಾಯದಿಂದ ಪಾರಾದ ಘಟನೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.

ತುಮಕೂರು : ನವಜಾತ ಶಿಶುಗಳ ತೀವ್ರ ನಿಗಾಘಟಕದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನರ್ಸ್‌ಗಳಿಬ್ಬರ ಸಮಯ ಪ್ರಜ್ಞೆಯಿಂದ 19 ನವಜಾತ ಶಿಶುಗಳು ಪ್ರಾಣಾಪಾಯದಿಂದ ಪಾರಾದ ಘಟನೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.

ಜಿಲ್ಲಾಸ್ಪತ್ರೆಯ ನವಜಾತ ಶಿಶುಗಳ ಆರೈಕೆಗಾಗಿ ಇರುವ ಎನ್‌ಐಸಿಯು ಘಟಕದಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಎಸಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎನ್ಐಸಿಯುನಲ್ಲಿದ್ದ ನರ್ಸ್‌ಗಳಾದ ಚಿಕ್ಕಸಿದ್ದಮ್ಮ ಹಾಗೂ ರಮೇಶ್ ಅವರು ಘಟಕದ ಕಿಟಕಿ ಗಾಜುಗಳನ್ನು ಒಡೆದು ನವಜಾತ ಶಿಶುಗಳನ್ನು ಕೂಡಲೇ ಬೇರೆ ವಾರ್ಡ್‌ಗಳಿಗೆ ಸ್ಥಳಾಂತರಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಇದರಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ. ಎಲ್ಲ 19 ಮಕ್ಕಳು ಸದ್ಯ ಸುರಕ್ಷಿತವಾಗಿವೆ. ಘಟನೆಯಲ್ಲಿ ನವಜಾತ ಶಿಶುಗಳ ಘಟಕ ಭಾಗಶಃ ಬೆಂಕಿಗೆ ಆಹುತಿಯಾಗಿದೆ.

click me!