ಎದೆ ಹಾಲುಣಿಸುವ ಫೋಟೋ: ಮಲಯಾಳಂ ನಿಯತಕಾಲಿಕೆ ವಿರುದ್ದ ಕೇಸು

By Suvarna Web DeskFirst Published Mar 3, 2018, 8:37 AM IST
Highlights

ಮಹಿಳೆಯೊಬ್ಬಳು ಮಗುವಿಗೆ ಎದೆಹಾಲು ಉಣಿಸುತ್ತಿರುವ ಚಿತ್ರ ಪ್ರಕಟಿಸಿದ ಮಲಯಾಳಂನ ‘ಗೃಹಲಕ್ಷ್ಮಿ’ ನಿಯತಕಾಲಿಕೆ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.

ಕೊಚ್ಚಿ: ಮಹಿಳೆಯೊಬ್ಬಳು ಮಗುವಿಗೆ ಎದೆಹಾಲು ಉಣಿಸುತ್ತಿರುವ ಚಿತ್ರ ಪ್ರಕಟಿಸಿದ ಮಲಯಾಳಂನ ‘ಗೃಹಲಕ್ಷ್ಮಿ’ ನಿಯತಕಾಲಿಕೆ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲಂ ಜೆಸಿಎಂ ಕೋರ್ಟ್‌ನಲ್ಲಿ ವಕೀಲ ವಿನೋದ್‌ ಮ್ಯಾಥ್ಯು, ನಿಯತಕಾಲಿಕೆಯ ಪ್ರಕಾಶಕರು ಮತ್ತು ರೂಪದರ್ಶಿ ಗಿಲು ಜೋಸೆಫ್‌ ವಿರುದ್ಧ ‘ಮಹಿಳೆಯರ ಅನುಚಿತ ಪ್ರತಿನಿಧಿತ್ವ ಕಾಯ್ದೆ- 1986’ರ ಅಡಿಯಲ್ಲಿ ಪ್ರಕರಣ ಪ್ರಕರಣ ದಾಖಲಿಸಿದ್ದಾರೆ.

ಆಲುವಾ ಇನ್ನೊಬ್ಬ ವಕೀಲ ಜಿಯಾಸ್‌ ಜಮಾಲ್‌ ಎನ್ನುವವರು ರಾಜ್ಯ ಮಕ್ಕಳ ಹಕ್ಕು ಆಯೋಗಕ್ಕೆ ರೂಪದರ್ಶಿ ಗಿಲು ಮತ್ತು ಪ್ರಕಾಶಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮಾತೃಭೂಮಿ ‘ಗೃಹಲಕ್ಷ್ಮೇ’ ನಿಯತಕಾಲಿಕೆ 2018ರ ಮಾಚ್‌ರ್‍ ತಿಂಗಳ ಆವೃತ್ತಿಯ ಮುಖಪುಟದಲ್ಲಿ ಮುಕ್ತ ಸ್ತನ್ಯಪಾನವನ್ನು ಪ್ರಚಾರ ಮಾಡುವ ಉದ್ದೇಶದಿಂದ ಫೋಟೋವನ್ನು ಪ್ರಕಟಿಸಲಾಗಿತ್ತು.

ಆದರೆ, ಇದಕ್ಕೆ ಸಾಮಾಜಿಕ ಜಾಲತಾತಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಿಯತಕಾಲಿಕೆಯಲ್ಲಿ ನೈಜ ತಾಯಿ ಬಳಸುವ ಬದಲು ವಿವಾಹವಾಗದೇ ಇರುವ ರೂಪದರ್ಶಿ ಬಳಸಿಕೊಂಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

 

click me!